'ರಾಧಾ ರಮಣ' ಧಾರಾವಾಹಿ ವೀಕ್ಷಕರಿಗೆ ಕಾದಿದೆ ಬ್ಯಾಡ್ ನ್ಯೂಸ್…!!

07 May 2018 3:52 PM | Entertainment
33512 Report

'ಕಲರ್ಸ್ ಕನ್ನಡ' ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ 'ಅವನಿ ಆಗಮನ' ಅಧ್ಯಾಯ ಶುರುವಾಗಿದೆ. ಕಡೆಗೂ 'ಅವನಿ' ರಮಣ್ ಕೈಸೇರಿದ್ದಾಳೆ. ಇಪ್ಪತ್ತು ವರ್ಷಗಳ ಬಳಿಕ 'ಅವನಿ' ತನ್ನ ಮನೆ ಸೇರಿರುವುದಕ್ಕೆ ವೀಕ್ಷಕರಂತೂ ಫುಲ್ ಖುಷಿಯಾಗಿದ್ದರು.

ಆದ್ರೆ, ಇದೇ ಖುಷಿ ಮುಂದಿನ ಸಂಚಿಕೆಗಳಲ್ಲಿ ಮುಂದುವರೆಯುವುದು ಅನುಮಾನ. ಯಾಕಂದ್ರೆ, ಇವತ್ತಿನ ಸಂಚಿಕೆಯಲ್ಲಿ ವೀಕ್ಷಕರಿಗೆ ಒಂದು ಬ್ಯಾಡ್ ನ್ಯೂಸ್ ಕಾದಿದೆ. ನಿಮಗೆಲ್ಲ ಗೊತ್ತಿರುವ ಹಾಗೆ, 'ಅವನಿ' ವಿಷಯ ಈಗಾಗಲೇ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದೆ. ಇಷ್ಟು ವರ್ಷಗಳ ಕಾಲ 'ಅವನಿ'ಯನ್ನ ನೋಡಿಕೊಳ್ಳುತ್ತಿದ್ದ ರುದ್ರ ಪೊಲೀಸರ ಅತಿಥಿಯಾಗಿದ್ದಾನೆ. ರುದ್ರನನ್ನ ಬೆಂಡೆತ್ತಿ ಬ್ರೇಕ್ ಹಾಕಿದ್ಮೇಲೆ, ಅದೇನು ವಿಷಯ ಗೊತ್ತಾಯ್ತೋ ಏನೋ, ಸೀದಾ ರಮಣ್ ಮನೆಗೆ ಬಂದ ಪೊಲೀಸರು 'ಬ್ಯಾಡ್ ನ್ಯೂಸ್' ಹೇಳಲು ಮುಂದಾಗಿದ್ದಾರೆ. ರಮಣ್ ಗೆ ಬ್ಯಾಡ್ ನ್ಯೂಸ್ ಕಾದಿದೆ ಅಂದ್ರೆ, ವೀಕ್ಷಕರಿಗೂ ಅದರಿಂದ ದುಃಖ ತಂದರೆ ಅಚ್ಚರಿ ಇಲ್ಲ. ಮನೆಗೆ 'ಅವನಿ' ಎಂಟ್ರಿಕೊಟ್ಟಿರುವ ಸಂಗತಿ ಸಿತಾರ ದೇವಿಗೆ ಶಾಕ್ ತಂದಿದೆ. 'ಅವನಿ' ಎದುರು ಬರುವ ತಾಕತ್ತು ಸಿತಾರ ದೇವಿಗೆ ಇಲ್ಲದಂತಾಗಿದೆ. ಇತ್ತ ಅತ್ತೆ 'ಸಿತಾರ ದೇವಿ' ಹೆಸರು ಕೇಳಿದ ಕೂಡಲೆ 'ಅವನಿ' ಪ್ರಜ್ಞೆ ತಪ್ಪಿ ಬಿದ್ದಿದ್ದು, ಮನೆಯವರಲ್ಲಿ ಆತಂಕ ಮೂಡಿಸಿದೆ.

'ಅವನಿ' ವಿಷಯದಲ್ಲಿ ಡಬಲ್ ಗೇಮ್ ಆಡಿದ್ದು ಸ್ವಂತ ಮಗಳು ದೀಪಿಕಾ ಅನ್ನೋ ಸತ್ಯ ಸಿತಾರ ದೇವಿ ಅರಿವಿಗೆ ಬಂದಿದೆ. ಒಂದ್ಕಡೆ ಮಗಳ ಮೇಲೆ ಸಿಟ್ಟು, ಇನ್ನೊಂದು ಕಡೆ ಆತಂಕ. ಒಟ್ನಲ್ಲಿ ಸಿತಾರ ಸದ್ಯ ಪೇಚಿಗೆ ಸಿಲುಕಿದ್ದಾರೆ. ಆಂಬ್ಯುಲೆನ್ಸ್ ನಲ್ಲಿ 'ಅವನಿ'ಯನ್ನ ರುದ್ರ ಕಿಡ್ನ್ಯಾಪ್ ಮಾಡಿಕೊಂಡು ಹೋದ್ಮೇಲೆ, ಸಿತಾರ ದೇವಿ ಕೂಡ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆ ಆಗಿದ್ದರು. ಹೀಗಾಗಿ, ರಾತ್ರೋರಾತ್ರಿ ಸಿತಾರ ದೇವಿ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿರಬಹುದಾ ಎಂಬ ಅನುಮಾನ ವೀಕ್ಷಕರಲ್ಲಿ ಕಾಡುತ್ತಿದೆ. ಅಷ್ಟು ಸುಲಭವಾಗಿ ಮನೆಯವರ ಕೈಗೆ 'ಅವನಿ'ಯನ್ನ ಸೇರಿಸಲು ಸಿತಾರ ದೇವಿ ಬಿಡುವುದಿಲ್ಲ. ಆಂಬ್ಯುಲೆನ್ಸ್ ನಲ್ಲಿ 'ಅವನಿ' ಜಾಗಕ್ಕೆ ಬೇರೆಯವರನ್ನ ಕರೆದು ತಂದಿರಬಹುದು ಎಂದು ವೀಕ್ಷಕರು ಲೆಕ್ಕ ಹಾಕುತ್ತಿದ್ದಾರೆ. 'ರುದ್ರ'ನನ್ನ ವರ್ಕ್ ಮಾಡಿದ್ಮೇಲೆ, ಪೊಲೀಸರು ರಮಣ್ ಮನೆಗೆ ಬಂದು 'ನಿಮಗೊಂದು ಬ್ಯಾಡ್ ನ್ಯೂಸ್ ಇದೆ' ಅಂತ ಹೇಳಿದ್ದಾರೆ.

Edited By

Shruthi G

Reported By

Shruthi G

Comments