ಡೆಡ್ಲಿ ಆದಿತ್ಯ ಆರಂಭಿಸಿದ 'ಮುಂದುವರೆದ ಅಧ್ಯಾಯ'

ಡೆಡ್ಲಿ ಸೋಮ ಚಿತ್ರದ ನಟ ಡೆಡ್ಲಿ ಆದಿತ್ಯ 'ಬೆಂಗಳೂರು ಅಂಡರ್ ವರ್ಲ್ಡ್' ಸಿನಿಮಾದ ನಂತರ ಬೇರೆ ಯಾವುದೇ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿರಲಿಲ್ಲ. ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದರು. ಇಷ್ಟು ದಿನಗಳವರೆಗೂ ಸೈಲೆಂಟ್ ಆಗಿದ್ದ ಆದಿತ್ಯ ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ..
ಆದಿತ್ಯ ಅಭಿನಯದ ಹೊಸ ಸಿನಿಮಾ ‘ಮುಂದುವರೆದ ಅಧ್ಯಾಯ’ ಚಿತ್ರ ಇನ್ನು ಕೆಲವೇ ದಿನಗಳಲ್ಲಿ ಸೆಟ್ಟೇರಲಿದೆಯಂತೆ. ಆದಿತ್ಯ ಜನ್ಮದಿನದ ವಿಶೇಷವಾಗಿ ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಬಾಲು ಚಂದ್ರಶೇಖರ್ ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ಮಾಣ ಸಂಸ್ಥೆಯಲ್ಲಿ ಕೆಲಸವನ್ನು ಮಾಡಿದ್ದರು. ಮುಂದುವರೆದ ಅಧ್ಯಾಯ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸ್ವತಂತ್ರ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ. ಚಿತ್ರಕ್ಕೆ ದಿಲೀಪ್ ಚಕ್ರವರ್ತಿ ಅವರ ಛಾಯಾಗ್ರಹಣವಿದ್ದು ಶ್ರೀಕಾಂತ್ ಸಂಕಲನ ಮಾಡುತ್ತಿದ್ದಾರೆ. ಆದಿತ್ಯ ಅವರ ಅಭಿಮಾನಿಗಳು ಇನ್ನೂ ಸ್ವಲ್ಪ ಕಾಯಲೇಬೇಕು.
Comments