ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್..!

ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣದಿಂದ ಈಗಾಗಲೇ ಬಿಡುಗಡೆಯಾಗಬೇಕಾಗಿದ್ದಂತಹ ಕುರುಕ್ಷೇತ್ರ ಸಿನಿಮಾದ ಹಾಡುಗಳಿಗೆ ಬ್ರೇಕು ಬಿದ್ದಿತ್ತು, ಆದರೆ ಇದೀಗ ಹಾಡುಗಳುನ್ನು ಬಿಡುಗಡೆ ಮಾಡಲು ಡೇಟ್ ಫಿಕ್ಸ್ ಆಗಿದೆ.
ಎಸ್. ಮೇ 12 ಕ್ಕೆ ರಾಜ್ಯ ವಿಧಾನಸಭೆ ಚುನಾವಣೆಯ ದಿನದಂದೆ ಹಾಡುಗಳ ಬಿಡುಗಡೆ ಸಮಾರಂಭವನ್ನು ನಡೆಸುವುದಾಗಿ ಚಾಲೆಂಜಿಂಗ್ ಸ್ಟಾರ್ ತಿಳಿಸಿದ್ದಾರೆ. ನಿರ್ಮಾಪಕ ಮುನಿರತ್ನ ಈ ಭಾರಿ ಚುನಾವಣೆಯ ಕಣದಲ್ಲಿರುವುದರಿಂದ ಚುನಾವಣಾ ನೀತಿ ಸಂಹಿತೆಯು ಕುರುಕ್ಷೇತ್ರ ಚಿತ್ರದ ಹಾಡುಗಳ ಬಿಡುಗಡೆಗೆ ಅಡ್ಡಿಯಾಗಿತ್ತು. ಆದರೆ ಇದೀಗ ಚುನಾವಣೆ ಮುಗಿದ ನಂತರ ಹಾಡುಗಳನ್ನು ಬಿಡುಗಡೆ ಮಾಡುವ ಪ್ಲಾನ್ ಚಿತ್ರತಂಡ ಇಟ್ಟುಕೊಂಡಿತ್ತು. ಆದರೆ ಇದೀಗ ಚುನಾವಣೆ ದಿನ ಮೇ.12 ರಂದು ನೀತಿ ಸಂಹಿತೆ ಇಲ್ಲದ ಕಾರಣ ಅಂದೆ ಹಾಡುಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನ ಮಾಡಿದೆ. ಡಿ-ಬಾಸ್ ಅಭಿಮಾನಿಗಳು ಕುರುಕ್ಷೇತ್ರದ ಹಾಡುಗಳನ್ನು ಇನ್ನು ಸ್ವಲ್ಪ ದಿನಗಳಲ್ಲೆ ಕೇಳಿ ಆನಂದಿಸಬಹುದು.
Comments