ಸಾಹೂ ಚಿತ್ರದ ಆಕ್ಷನ್ ಸೀನ್ ಗಾಗಿ ಖರ್ಚು ಮಾಡಲಾಗ್ತಿದೆ 90 ಕೋಟಿ..!

'ಬಾಹುಬಲಿ' ನಂತರ ನಟ ಪ್ರಭಾಸ್ ನಟಿಸುತ್ತಿರುವ ಚಿತ್ರ 'ಸಾಹೂ' ಅಭಿಮಾನಿಗಳಲ್ಲಿ ಸಖತ್ ಕ್ಯೂರಾಸಿಟಿಯನ್ನು ಕ್ರಿಯೆಟ್ ಮಾಡಿದೆ.. ಸುಜಿತ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ಗೆ ಜೊತೆಯಾಗಿ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಸ್ಕ್ರೀನ್ ಶೇರ್ ಮಾಡಲಿದ್ದಾರೆ.
ಚಿತ್ರತಂಡ ದುಬೈನಲ್ಲಿ ಚಿತ್ರದ ಚಿತ್ರೀಕರಣ ನಡೆಸುತ್ತಿದ್ದು, ಚೇಸಿಂಗ್, ಆಕ್ಷನ್ ಸೀನ್ ಗಳ ಶೂಟಿಂಗ್ ಸಿದ್ದಪಡಿಸಿಕೊಳ್ಳುತ್ತಿದೆ. ಅದಕ್ಕೆಂದೇ ಚಿತ್ರತಂಡ ಶೂಟಿಂಗ್ ಗೆ ಬರೋಬ್ಬರಿ 90 ಕೋಟಿ ರೂ. ವೆಚ್ಚ ಮಾಡುತ್ತಿದೆ. ಇತ್ತೀಚಿಗಷ್ಟೇ ಅಬುಧಾಬಿಯಲ್ಲಿ ನಡೆಯುತ್ತಿರುವ ಶೂಟಿಂಗ್ ವೇಳೆ ಚೇಸಿಂಗ್ ದೃಶ್ಯದಲ್ಲಿ ಬೈಕ್ ಮೇಲೆ ಕುಳಿತಿರುವ ಪ್ರಭಾಸ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಚಿತ್ರತಂಡದ ಜೊತೆಗೆ ಹಾಲಿವುಡ್ ಆ್ಯಕ್ಷನ್ ಕೋರಿಯೋಗ್ರಾಫರ್ ಕೆನ್ನಿ ಬೇಟ್ಸ್ ಹಾಗೂ ಉಳಿದ ಆಕ್ಷನ್ ನಿರ್ದೇಶಕರೂ ಇದ್ದಾರೆ. ಇನ್ನೂ ಒಂದು ತಿಂಗಳು ದುಬೈನಲ್ಲಿಯೇ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ಹೇಳಿದೆ.
Comments