ಮತ್ತೆ ಪಡ್ಡೆ ಹುಡುಗರ ನಿದ್ದೆ ಕದ್ದ ಕಣ್ಸನ್ನೆ ಹುಡುಗಿ..!
ಕಣ್ಸನ್ನೆ ಹುಡುಗಿ ಎಂದೆ ಫೇಮಸ್ ಆದ ಪ್ರಿಯಾ ಪ್ರಕಾಶ್ ಕಣ್ಣು ಹೊಡೆಯೋದಷ್ಟೆ ಅಲ್ಲ ಹಾಡಿನಲ್ಲೂ ಕೂಡ ಮುಂದಿದ್ದಾಳೆ. ಪ್ರಿಯಾ ಪ್ರಕಾಶ್ ಹೊಸ ವಿಡಿಯೋವೊಂದು ವೈರಲ್ ಆಗಿದೆ. ಪ್ರಿಯಾ ಸ್ನೇಹಿತರ ಜೊತೆ ಹಾಡ್ತಿರುವ ವಿಡಿಯೋ ಇದಾಗಿದೆ.
ಕಾಂಜೀವರಂ ಸೀರೆಯಲ್ಲಿ ಮಿಂಚುತ್ತಿರುವ ನಟಿ ಪ್ರಿಯಾ ಪ್ರಕಾಶ್ ಸ್ನೇಹಿತರ ಜೊತೆ ಹಾಡಿ ಕುಣಿದಿದ್ದಾಳೆ. ಹವಾ ಹವಾ ಹಾಡಿಗೆ ಧ್ವನಿಗೂಡಿಸಿದಷ್ಟೆ ಅಲ್ಲ ಪ್ರಿಯಾ ಸ್ನೇಹಿತರ ಜೊತೆ ಹಾಡಿದ್ದಲ್ಲದೆ ಸಖತ್ ಎಕ್ಸ್ಪ್ರೆಶನ್ ನೀಡಿ ಎಂಜಾಯ್ ಮಾಡಿದ್ದಾಳೆ. ಪ್ರಿಯಾ ಪ್ರಕಾಶ್ ಸದ್ಯಕ್ಕೆ ಏನೇ ಮಾಡಿದ್ರೂ ಸುದ್ದಿಯಾಗ್ತಿದೆ. ಪ್ರಿಯಾ ಪ್ರಕಾಶ್ ಕೆಲ ದಿನಗಳ ಹಿಂದಷ್ಟೇ ಜಾಹೀರಾತಿನ ಮೂಲಕ ಸುದ್ದಿಯಾಗಿದ್ದಾಳೆ. ಆ ನಂತರ ಲವ್ ಲೆಟರ್ ವಿಡಿಯೋವೊಂದು ವೈರಲ್ ಆಗಿತ್ತು. ಅದೆಲ್ಲದಕ್ಕಿಂತ ಮೊದಲು ಕಣ್ಣು ಮಿಟುಕಿಸಿ ರಾತ್ರೋರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾ ಸದ್ದು ಮಾಡಿದ್ದಳು. ರಾತ್ರೊರಾತ್ರಿ ಕೋಟ್ಯಾಂತರ ಮಂದಿ ಪ್ರಿಯಾ ಅಭಿಮಾನಿಯಾಗಿದ್ದರು.
Comments