ಮತ್ತೊಂದು ಪೌರಾಣಿಕ ಚಿತ್ರವನ್ನು ನಟ ದರ್ಶನ್ ಒಪ್ಪಿಕೊಂಡಿದ್ದಾರಾ?

ಸ್ಯಾಂಡಲ್ ವುಡ್ ನಲ್ಲಿ ಡಿ ಬಾಸ್ ಸದ್ಯ, ಕುರುಕ್ಷೇತ್ರ ಚಿತ್ರ ಮುಗಿಸಿ ಮತ್ತೊಂದು ಪೌರಾಣಿಕ ಚಿತ್ರದಲ್ಲಿ ನಟಿಸಲು ಸಿದ್ದತೆಯನ್ನು ನಡೆಸುತ್ತಿದ್ದಾರಂತೆ.
ಈ ರೀತಿಯ ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ಸುತ್ತಾಡುತ್ತಿದೆ. ಪೌರಾಣಿಕ ಚಿತ್ರಗಳನ್ನ ಮಾಡಲು ಮುಂದೆ ಬರುವ ನಿರ್ಮಾಪಕರಿಗೆ ಮೊದಲು ಕಾಲ್ ಶೀಟ್ ಕೊಡುವುದಾಗಿದ್ದ ಹೇಳಿದ್ದ ದರ್ಶನ್ ಅವರ ಮಾತನ್ನ ಕೇಳಿ, ಕನ್ನಡದ ಕಥೆಗಾರರು, ನಿರ್ಮಾಪಕರುಗಳು ದರ್ಶನ್ ಬಳಿ ಪೌರಾಣಿಕ ಕಥೆಗಳನ್ನ ತೆಗೆದುಕೊಂಡು ಬರ್ತಿದ್ದಾರೆ ಎನ್ನಲಾಗುತ್ತಿದೆ. ಕನ್ನಡದ ಹಿರಿಯ ನಟರೊಬ್ಬರು ದರ್ಶನ್ ಗೆ ರಾವಣನ ಕಥೆ ಓದಲು ಸ್ಕ್ರಿಪ್ಟ್ ನೀಡಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಯಾವುದೇ ರೀತಿಯ ಮಾಹಿತಿ ಸಿಕ್ಕಿಲ್ಲ.
Comments