ಜನ್ಮದಿನದಂದು ಅನುಷ್ಕಾ ತೆಗೆದುಕೊಂಡ ನಿರ್ಧಾರ ಏನು ಗೊತ್ತಾ?

ಇತ್ತಿಚಿಗಷ್ಟೆ ಅಂದರೆ ಮೇ 1 ರಂದು ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಜನ್ಮದಿನದಂದು ಒಂದು ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಪಶು ಪ್ರೇಮಿಯಾದ ನಟಿ ಅನುಷ್ಕಾ ಬೀದಿಗಳಲ್ಲಿ ಅನಾಥವಾಗಿ ಓಡಾಡಿಕೊಂಡಿರುವ ನಾಯಿ, ಪಶುಗಳಿಗೆ ತಾನು ಏನಾದರೂ ಮಾಡಬೇಕು ಎಂದು ಕನಸು ಕಂಡಿದ್ದು, ಇದೀಗ ಅವುಗಳಿಗಾಗಿ ಆಸರೆಯ ಕೇಂದ್ರವೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ. 'ಮುಂಬಯಿ ಹೊರವಲಯದಲ್ಲಿ ನಾನೊಂದು ಪಶು ಆಸರೆ ಕೇಂದ್ರವನ್ನು ನಿರ್ಮಿಸಲು ನಿರ್ಧರಿಸಿದ್ದೇನೆ. ಅನಾಥವಾಗಿ, ಯಾರಿಗೂ ಬೇಡವಾಗಿ, ಬೀದಿಗಳಲ್ಲಿ ಅತ್ಯಂತ ಕಠಿಣ ಸ್ಥಿತಿಯಲ್ಲಿ ಅಡ್ಡಾಡಿಕೊಂಡಿರುವ ಮೂಕ ಪ್ರಾಣಿ ಪಶುಗಳಿಗೆ ಪ್ರೀತಿ, ರಕ್ಷಣೆ, ಪೋಷಣೆ ಸಿಗುವ ಕೇಂದ್ರ ಅದಾಗಿರುತ್ತದೆ. ಮನುಷ್ಯರ ಹಾಗೆ ಬಲಿಷ್ಠವಲ್ಲದ ಮೂಕ ಪ್ರಾಣಿಗಳ ಬಗ್ಗೆ ಜನರು ದಯೆತೋರಿ ಅವುಗಳನ್ನು ರಕ್ಷಿಸಿ ಪೋಷಿಸುವ ಆಸಕ್ತಿಯನ್ನು ಜನರು ತೋರಬೇಕು' ಎಂದು ನಟಿ ಅನುಷ್ಕಾ ಶರ್ಮಾ ಅವರು ಹೇಳಿದ್ದಾರೆ. ಈ ನಿರ್ಧಾರ ತೆಗೆದುಕೊಳ್ಳಲು ತನಗೆ ಟಿಬೆಟ್ ಧರ್ಮಗುರುಗಳಾದ ದಲಾಯಿ ಲಾಮಾ ಪ್ರೇರಣೆಯಾಗಿದ್ದಾರೆ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.
Comments