ರೆಬಲ್ ಸ್ಟಾರ್ ಮಗನ ಚಿತ್ರಕ್ಕೆ ಟೈಟಲ್ ಫಿಕ್ಸ್

ಸ್ಯಾಂಡಲ್ ವುಡ್ ನ ರೆಬಲ್ ಸ್ಟಾರ್ ಅಂಬರೀಶ್-ಸುಮಲತಾ ದಂಪತಿ ಪುತ್ರ ಅಭಿಷೇಕ್ ಗೌಡ ಮೊದಲ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದ್ದು, ನಾಗಶೇಖರ್ ನಿರ್ದೇಶನದಲ್ಲಿ ಮೂಡಿ ಬರಲಿರುವ ಚಿತ್ರಕ್ಕೆ 'ಅಮರ್' ಎನ್ನುವ ಟೈಟಲ್ ಫೈನಲ್ ಮಾಡಲಾಗಿದೆ.
ಅಭಿಷೇಕ್ ಗೌಡ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಈಗಾಗಲೇ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದಾರೆ. ಇದನ್ನು ಸುಮಲತಾ ಅಂಬರೀಶ್ ಕಳೆದ ವರ್ಷವೇ ಖಚಿತಪಡಿಸಿದ್ದು ಇದೀಗ ಅಭಿಷೇಕ್ ಚಿತ್ರರಂಗಕ್ಕೆ ಬರಲು ವೇದಿಕೆ ಸಜ್ಜಾಗಿದೆ. ನಾಗಶೇಖರ್ ಲವ್, ಆಕ್ಷನ್, ಫ್ಯಾಮಿಲಿ ಸೆಂಟಿಮೆಂಟ್ ಒಳಗೊಂಡ ವಿಶೇಷ ಕತೆಯನ್ನು ರೆಡಿ ಮಾಡಿದ್ದಾರೆ. ಅಂಬರೀಶ್ ಸದ್ಯ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದರೊಂದಿಗೆ ಪುತ್ರನ ಚಿತ್ರದ ಬಗ್ಗೆಯೂ ತಯಾರಿಯು ಕೂಡ ನಡೆಯುತ್ತಿದೆ.
Comments