ಮದುವೆಗೂ ಮೊದಲೆ ಬ್ಯಾಚುಲರ್ ಪಾರ್ಟಿಯಲ್ಲಿ ಸೋನಂ ಹಾಗೂ ಕರೀನಾ
ಬಾಲಿವುಡ್ನ ಬೆಡಗಿ ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ಅವರ ಮದುವೆ ತಯಾರಿ ಜೋರಾಗಿಯೆ ನಡೆದಿದೆ. ಆನಂದ್ ಅಹುಜಾ ಜೊತೆ ಸೋನಂ ಕಪೂರ್ ಮೇ 8 ರಂದು ಸಪ್ತಪದಿ ತುಳಿಯಲಿದ್ದಾರೆ. ಮೆಹಂದಿ ಹಾಗೂ ಅರಿಶಿನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ.
ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಒಂದು ಕಡೆ ಸೋನಂ ಮದುವೆ ತಯಾರಿಯಲ್ಲಿದ್ದರೆ ಮತ್ತೊಂದು ಕಡೆ ಸೋನಂ ಅಭಿನಯದ 'ವೀರ್ ದಿ ವೆಡ್ಡಿಂಗ್' ಚಿತ್ರದ ಹಾಡು ಕೂಡ ಬಿಡುಗಡೆಯಾಗಿದೆ. ಈ ಹಾಡು ಸೋನಂ ಬ್ಯಾಚುಲರ್ ಪಾರ್ಟಿಗೆ ಹೇಳಿ ಮಾಡಿಸಿದ ರೀತಿ ಇದೆ. ಸೋನಂ ಕಪೂರ್ ಹಾಗೂ ಕರೀನಾ ಕಪೂರ್ ಈ ಹಾಡಿನಲ್ಲಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸೋನಂ ಕಪೂರ್, ಕರೀನಾ ಜೊತೆ ಸ್ವರಾ ಬಾಸ್ಕರ್ ಕೂಡ ಹಾಡಿನಲ್ಲಿ ಸಖತ್ ಆಗಿಯೆ ಮಿಂಚಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್ ನಲ್ಲಿ ಹಾಗೂ ಹಾಡಿನಲ್ಲಿ ಕರೀನಾ ಹಾಗೂ ಸೋನಂ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆಗೆ ಸಿದ್ದವಾಗಿರುವ ಈ ಹುಡುಗಿ 'ವೀರ್ ದಿ ವೆಡ್ಡಿಂಗ್' ಚಿತ್ರದ ಸಾಂಗಿನಲ್ಲಿ ಸಖತ್ ಆಗಿಯೆ ಮಿಂಚಿದ್ದಾರೆ.
Comments