ಮಲೇಷಿಯಾದಲ್ಲಿ ಅಭಿನಯ ಚಕ್ರವರ್ತಿಯ ಫ್ಯಾಮಿಲಿ ಟ್ರಿಪ್

ಸ್ಯಾಂಡಲ್ ವುಡ್ ನಲ್ಲಿ ಇರುವವರಿಗೆ ಫ್ಯಾಮಿಲಿ ಜೊತೆ ಟೈಮ್ ಪಾಸ್ ಮಾಡೋಕೆ ಆಗಲ್ಲ.ಆದರೂ ನಮ್ಮ ಕಿಚ್ಚ ಸುದೀಪ್ ಬಿಡುವು ಮಾಡಿಕೊಂಡು ಫ್ಯಾಮಿಲಿ ಜೊತೆ ಟ್ರಿಪ್ ಹೋಗಿದ್ದಾರೆ. ಬೇಸಿಗೆ ಶುರುವಾಗಿದೆ. ಮಗಳನ್ನ ತುಂಬಾ ಪ್ರೀತಿ ಮಾಡುವ ಕಿಚ್ಚ ಸುದೀಪ್ ತಮ್ಮ ಫ್ಯಾಮಿಲಿ ಜೊತೆ ರಜೆಯ ಪ್ರವಾಸಕ್ಕೆ ಹೋಗಿ ಬಂದಿದ್ದಾರೆ.
ಚಿತ್ರೀಕರಣದ ಬ್ರೇಕ್ ಇದ್ದ ಕಾರಣ ಸುದೀಪ್, ಪ್ರಿಯಾ ಸುದೀಪ್ ಹಾಗೂ ಮಗಳು ಸಾನ್ವಿ ಆರು ದಿನಗಳ ಪ್ರವಾಸ ಮುಗಿಸಿ ಬಂದಿದ್ದಾರೆ. ಮಲೇಷಿಯಾದ ಸುಂದರ ತಾಣಗಳನ್ನ ಈ ಬಾರಿಯ ಪ್ರವಾಸದಲ್ಲಿ ಕಿಚ್ಚ ಅಂಡ್ ಫ್ಯಾಮಿಲಿ ಸುತ್ತಾಡಿ ಬಂದಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ಕಿಚ್ಚನ ಪತ್ನಿ ಪ್ರಿಯಾ ಸುದೀಪ್ ಮಗಳ ಜೊತೆ ಇರುವ ಫೋಟೋವನ್ನ ಟ್ವಿಟ್ಟರ್ ನಲ್ಲಿ ಶೇರ್ ಕೂಡ ಮಾಡಿದ್ದಾರೆ. ಸುದೀಪ್ ಗೆ ಸಾನ್ವಿ ಎಂದರೆ ತುಂಬಾ ಪ್ರೀತಿ. ಇತ್ತೀಚಿನ ದಿನಗಳಲ್ಲಿ ಮಗಳ ಫ್ರೆಂಡ್ಸ್ ಬರ್ತಡೇ ಪಾರ್ಟಿ. ಮಗಳ ಶಾಲೆಯ ಕಾರ್ಯಕ್ರಮಗಳಲ್ಲಿ ಸುದೀಪ್ ಹಾಗೂ ಪ್ರಿಯಾ ಇಬ್ಬರು ಭಾಗಿ ಆಗುತ್ತಿದ್ದಾರೆ. ಕಿಚ್ಚ ಫ್ಯಾಮಿಲಿ ಪೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
Comments