ವೈರಲ್ ಆಗಿದೆ ಬಾಹುಬಲಿ ಪ್ರಭಾಸ್ ನ ನ್ಯೂ ಲುಕ್

ಪ್ರಭಾಸ್… ಬಾಹುಬಲಿ ಚಿತ್ರದ ಬಳಿಕ ಎಲ್ಲರ ಫೆವರಿಟ್ ಸ್ಟಾರ್ ಆಗಿರೋ ಪ್ರಭಾಸ್ ಆಕ್ಷನ್ ಫಿಲ್ಮ್ ಸಾಹೂ ನಲ್ಲಿ ನಟಿಸುತ್ತಿರುವ ಸುದ್ದಿ ಎಲ್ಲರಿಗೂ ಗೊತ್ತಿದೆ.
ಈ ಚಿತ್ರದಲ್ಲಿ ಪ್ರಭಾಸ್ ಗೆ ಜೊತೆಯಾಗಿ ಬಾಲಿವುಡ್ ನ ಶ್ರದ್ಧಾ ಕಪೂರ್ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಸುಜಿತ್ ನಿರ್ದೇಶನದ ಸಾಹೂ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಹತ್ತತ್ರ ಒಂದು ವರ್ಷವಾದರೂ ಕೂಡ ಚಿತ್ರ ಬಿಡುಗಡೆಯಾಗಿಲ್ಲ. ಪ್ರಭಾಸ್ ರನ್ನು ಆಕ್ಷನ್ ಅವತಾರದಲ್ಲಿ ನೋಡೋಕೆ ಅಭಿಮಾನಿಗಳೂ ಕಾಯುತ್ತಾ ಇದ್ದಾರೆ. ಚಿತ್ರದ ಸೆಟ್ ನಲ್ಲಿ ಪ್ರಭಾಸ್ ಬೈಕರ್ ಬಾಯ್ ಆಗಿ ಕಾಣಿಸಿಕೊಂಡಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಜೀನ್ಸ್ ಹಾಗೂ ಲೆದರ್ ಜಾಕೆಟ್ ತೊಟ್ಟು ಸ್ಟೈಲಿಶ್ ಲುಕ್ ನಲ್ಲಿ ಬೈಕ್ ಮೇಲೆ ಕುಳಿತಿರೋ ಚಿತ್ರಗಳು ಅಭಿಮಾನಿಗಳಿಗೆ ಸಖತ್ ಇಷ್ಟವಾಗಿವೆ. ಆದರೆ ಸಿನಿಮಾವನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಇನ್ನೂ ಬಹಳಷ್ಟು ದಿನ ಕಾಯಲೇ ಬೇಕು
Comments