ಈ ಸ್ಟಾರ್ ನಟಿಯರು ಫಿದಾ ಆಗಿದ್ದು ಈ ಡ್ರೆಸ್ ಗೆ
ಈ ಬಣ್ಣದ ಜಗತ್ತೆ ಹೀಗೆ, ದಿನದಿಂದ ದಿನಕ್ಕೆ ಟ್ರೆಂಡ್ ಬದಲಾಗುತ್ತಿರುತ್ತದೆ. ಆದರೆ ಒಮದು ಸಲ ಸಕ್ಸಸ್ ಕಂಡು ಗೆದ್ದರೆ ಸಾಕು ಒಂದಿಷ್ಟು ಸಿನಿಮಾ ಮಂದಿ ಅದರ ಹಿಂದೆಯೇ ಬೀಳುತ್ತಾರೆ. ಇದೀಗ ಡ್ರೆಸ್ನ ಸರದಿ ಶುರುವಾಗಿದೆ.ಎಲ್ಲಾ ಹೀರೋಹಿನ್ ಗಳು ಕೂಡ ಡ್ರೆಸ್ ಬಗ್ಗೆ ಹಿಂದೆಯೆ ಬಿದ್ದಿದ್ದಾರೆ.. ಯಾವ್ ಡ್ರೆಸ್ ಗೊತ್ತಾ?
ಓಲ್ಡ್ ಈಸ್ ಗೋಲ್ಡ್ ಎನ್ನುವ ರೀತಿಯಲ್ಲಿ ಹಳೆ ಕಾಲದ ನಾಯಕಿಯರು ಸುಂದರವಾಗಿ ಕಾಣಿಸಿಕೊಳ್ಳುತ್ತಿದ್ದ ಡ್ರಸ್ ಹಿಂದೆ ಈಗಿನ ಟಾಪ್ ಹೀರೋಯಿನ್ ಗಳು ಬಿದ್ದಿದ್ದಾರೆ. ಸಾಲು ಸಾಲಾಗಿ ಬರುತ್ತಿರುವ ಚಿತ್ರಗಳಲ್ಲಿ ನಾಯಕಿಯರು ಇದೇ ಡ್ರಸ್ ಹಾಕಿಕೊಂಡು ಹೀರೋಗಳನ್ನ ಇಂಪ್ರೆಸ್ ಮಾಡುವುದರ ಜೊತೆಯಲ್ಲಿ ತೆರೆ ಮೇಲೆ ಅಂದವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಬಹುತೇಕ ನಾಯಕಿಯರು ಲಂಗ ದಾವಣಿಗೆ ಫಿದಾ ಆಗಿದ್ದಾರೆ. ಹಿಂದಿನ ಕಾಲದಲ್ಲಿ ಟ್ರೆಂಡ್ ಸೆಟ್ ಮಾಡಿದ್ದ ಈ ಉಡುಪನ್ನು ಎಲ್ಲಾ ನಾಯಕಿಯರು ತಮ್ಮ ಸಿನಿಮಾಗಳಲ್ಲಿ ಬಳಸುತ್ತಿದ್ದಾರೆ. ನಟಿ ಶೃತಿಹರಿಹರನ್ ಲಂಗ-ದಾವಣಿಗೆ ಫಿದಾ ಆಗಿದ್ದಾರೆ. ತಾವು ಅಭಿನಯಿಸುತ್ತಿರುವ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ಲಂಗ-ದಾವಣಿ ಧರಿಸಿ ವೀಕ್ಷಕರನ್ನ ಮೋಡಿ ಮಾಡಲು ಸಿದ್ದರಾಗಿದ್ದಾರೆ ಶೃತಿ ಹರಿಹರನ್. ಪಾರೂಲ್ ಯಾದವ್ ಆಮಿ ಜಾಕ್ಸನ್ ಕೂಡ ಈ ಲಂಗದಾವಣಿಗೆ ಫಿದಾ ಆಗಿದ್ದಾರೆ.
Comments