ಕನ್ನಡ ಹಾಡು ಹಾಡಿದ ತಮಿಳು ನಟ ಸಿಂಬು..!
ನಾವು ಕೇಳಿದರೆ ಕನ್ನಡಿಗರು ಒಂದು ಲೋಟ ನೀರು ಕೊಡುವುದಿಲ್ಲವೇ? ಕನ್ನಡಿಗರು ನಮ್ಮ ಅಣ್ಣತಮ್ಮಂದಿರಿದ್ದಂತೆ ಎಂದು ಹೇಳಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ತಮಿಳು ನಟ ಸಿಂಬು ಈಗ 'ಇರುವುದೆಲ್ಲವ ಬಿಟ್ಟು' ಚಿತ್ರದ ಹಾಡಿಗೆ ಧ್ವನಿಯಾಗಲಿದ್ದಾರೆ ಎನ್ನಲಾಗಿದೆ.
ವಿ ನಾಗೇಂದ್ರ ಪ್ರಸಾದ್ ಬರೆದಿರುವ, 'ಊರ ಸುದ್ದಿ ಕೇಳ್ತಾ ಇರುವೆ, ಎಲ್ಲರಿಗೂ ಹೇಳ್ತಾ ಇರುವೆ, ನಿಂದು ಸ್ವಲ್ಪ ಸೇರ್ಸುತ್ತಿರುವೆ, ಯಾಕೆ ಬಿಟ್ಟುಕೊಳ್ತೀ ಇರುವೆ.' ಎಂಬ ಹಾಡಿಗೆ ಸಿಂಬು ಧ್ವನಿಯಾಗಿದ್ದಾರೆ. ಈ ಚಿತ್ರಕ್ಕೆ ಕಾಂತರಾಜ್ ಕನ್ನಲ್ಲಿ ಆಕ್ಷನ್ ಕಟ್ ಹೇಳಿದ್ದು ಮೇಘನಾ ರಾಜ್, ತಿಲಕ್ ಶೇಖರ್ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಚಿತ್ರ ಇನ್ನೂ ತೆರೆ ಮೇಲೆ ಮೂಡಿ ಬರಲು ಸಾಕಷ್ಟು ದಿನ ಬೇಕಾಗುತ್ತದೆ.
Comments