ಗೆಳೆಯನ ಬೈಕ್ ನಲ್ಲಿ ದರ್ಬಾರ್ ಮಾಡಿದ ಡಿ ಬಾಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳೆತನಕ್ಕೆ ತುಂಬಾ ಬೆಲೆ ಕೊಡುವ ವ್ಯಕ್ತಿ. ದೊಡ್ಡ ಸ್ಟಾರ್ ಆದರು, ಸಿನಿಮಾ ಕೆಲಸಗಳು ಎಷ್ಟೇ ಇದ್ದರೂ ದರ್ಶನ್ ಮಾತ್ರ ತಮ್ಮ ಸ್ನೇಹಿತರ ಜೊತೆ ಇಂದಿಗೂ ಸಮಯ ಕಳೆಯುತ್ತಾರೆ.. ಅವರ ಕಷ್ಟ, ಸುಖದಲ್ಲಿ ಭಾಗಿಯಾಗುತ್ತಾರೆ. ಹೀಗಿರುವ ದರ್ಶನ್ ಸದ್ಯ ತಮ್ಮ ಗೆಳೆಯನ ಬೈಕ್ ರೈಡ್ ಹೋಗಿದ್ದಾರೆ.
ನಟ ಧರ್ಮ ಕೀರ್ತಿರಾಜ್ ಅವರ ರಾಯಲ್ ಎನ್ ಫೀಲ್ಡ್ ಬೈಕ್ ಅನ್ನು ಇದೀಗ ದರ್ಶನ್ ಓಡಿಸಿದ್ದಾರೆ. ನೈಟ್ ಡ್ರೆಸ್ ನಲ್ಲಿ ಡಿ ಬಾಸ್ ಐರಾವತ ಏರಿ ಕುಳಿತಿದ್ದಾರೆ. ಈ ಸಮಯದಲ್ಲಿ ಧರ್ಮಕೀರ್ತಿ ರಾಜ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅದನ್ನು ಹಂಚಿಕೊಂಡಿದ್ದಾರೆ. ದರ್ಶನ್ ಅವರಿಗೆ ಕಾರ್ ಬೈಕ್ ಅಂದರೆ ತುಂಬ ಕ್ರೇಜ್ ಇದ್ದು, ಈಗ ಒಂದ್ ರೌಂಡ್ ರಾಯಲ್ ಎನ್ ಫೀಲ್ಡ್ ಬೈಕ್ ಓಡಿಸಿ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ.
Comments