14 ವರ್ಷಗಳ ನಂತರ ಮತ್ತೆ ಬೆಳ್ಳಿತೆರೆಯಲ್ಲಿ ಮಿಂಚಲಿರುವ ನಟ ಯಾರು ಗೊತ್ತಾ?



14 ವರ್ಷದ ನಂತರ ನಟ ರಾಘವೇಂದ್ರ ರಾಜ್ ಕುಮಾರ್ ಮತ್ತೆ ಬೆಳ್ಳಿತೆರೆಯಲ್ಲಿ ಮಿಂಚಲಿದ್ದಾರೆ. ಎಸ್. ಕ್ರೇಜಿಸ್ಟಾರ್ ರವಿಚಂದ್ರನ್ ಮಗ ಮನೋರಂಜನ್ ಅಭಿನಯಿಸುತ್ತಿರುವ 'ಚೀಲಂ' ಚಿತ್ರದಲ್ಲಿ ನೆಗಿಟೀವ್ ಪಾತ್ರದಲ್ಲಿ ರಾಘಣ್ಣ ಬಣ್ಣ ಹಚ್ಚಲಿದ್ದಾರಂತೆ. ಇದಲ್ಲದೇ ಮತ್ತೆರೆಡು ಚಿತ್ರಗಳಲ್ಲಿ ರಾಘಣ್ಣ ಅಭಿನಯಿಸಲಿದ್ದಾರಂತೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಿಖಿಲ್ ಮಂಜು ನಿರ್ದೇಶನದ 'ಅಮ್ಮನ ಮನೆ' ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ನಟಿಸುತ್ತಿದ್ದಾರೆ. ತಂದೆ ತಾಯಿಯ ಪ್ರೀತಿಯ ಬಗ್ಗೆಯೇ ಹೇಳುವ ಸಿನಿಮಾ ಇದಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಇದರ ಜೊತೆಗೆ ಪ್ರತಾಪ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಹಾರರ್ ಸಿನಿಮಾವನ್ನ ಒಪ್ಪಿಕೊಂಡಿದ್ದಾರಂತೆ ರಾಘಣ್ಣ. ಇನ್ನು ಈ ಸಿನಿಮಾಗಳ ಮಧ್ಯೆ ಎಸ್ ಕೆ ಭಗವಾನ್ ನಿರ್ದೇಶನದ 'ಆಡುವ ಗೊಂಬೆ' ಚಿತ್ರದ ಹಾಡೊಂದಕ್ಕೆ ರಾಘಣ್ಣ ಧ್ವನಿಯಾಗಿದ್ದು, ಬಿಡುಗಡೆ ಮಾತ್ರ ಬಾಕಿಯಿದೆ.ಏನೆ ಆಗಲಿ ಇಷ್ಟು ವರ್ಷಗಳ ನಂತರ ರಾಘಣ್ಣ ಬಣ್ಣ ಹಚ್ಚಿಕೊಳ್ಳುತ್ತಿರುವು ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದೆ.
Comments