ಹಿಂದು ಸಂಪ್ರದಾಯದಂತೆ ಇಂದು ಚಿರು-ಮೇಘನಾ ಕಲ್ಯಾಣ
ಸ್ಯಾಂಡಲ್ ವುಡ್ ಅಂಗಳದಲ್ಲಿ ಮದುವೆಯ ಸಂಭ್ರಮ…ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ವಿವಾಹ ಇಂದು ನಡೆಯಲಿದೆ. ಕಳೆದ ಭಾನುವಾರವಷ್ಟೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದ ಈ ಜೋಡಿ ಇವತ್ತು ಹಿಂದು ಸಂಪ್ರದಾಯದಂತೆ ಹಸೆಮಣೆ ಏರಲಿದ್ದಾರೆ. ಇಂದು (ಬುಧವಾರ) ಬೆಳ್ಳಗೆ 10.30ರ ಶುಭ ಮುಹೂರ್ತದಲ್ಲಿ ಮೇಘನಾ ಕೊರಳಿಗೆ ಚಿರು ಮಾಂಗಲ್ಯಧಾರಣೆಯನ್ನು ಮಾಡಲಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದಿನ ಮದುವೆ ಕಾರ್ಯಕ್ರಮಗಳು ಮೂರನೇ ಗೇಟ್ ವೈಟ್ ಪೆಟಲ್ಸ್ ನಲ್ಲಿ ನೆರವೇರಲಿದೆ. ದಕ್ಷಿಣ ಭಾರತದ ಅನೇಕ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಬರುವ ನಿರೀಕ್ಷೆ ಇದೆ. ಕಳೆದ ಭಾನುವಾರ ಸರಳವಾಗಿ ಚರ್ಚ್ ನಲ್ಲಿ ಮದುವೆ ನಡೆದಿದ್ದ ಕಾರಣ ಚಿತ್ರರಂಗದ ಮಿತ್ರರು ಮದುವೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಅದೇ ಕಾರಣಕ್ಕೆ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇನ್ನು ಕಳೆದ ಒಂದು ವಾರದಿಂದ ಮೇಘನಾ ಮನೆಯಲ್ಲಿ ಮದುವೆಯ ಸಂಭ್ರಮ ಜೋರಾಗಿಯೇ ಆಗಿದೆ. ಅರಿಶಿನ ಶಾಸ್ತ್ರ, ಬಳೆ ಶಾಸ್ತ್ರ, ಮೆಹಂದಿ, ಸಂಗೀತ ಕಾರ್ಯಕ್ರಮಗಳ ನಡೆಯುತ್ತಿದೆ. ಅಂತು ಇಂತೂ ಮೇಘನಾ ಚಿರು ಮದುವೆ ಅದ್ದೂರಿಯಾಗಿಯೇ ನಡೆಯುತ್ತಿದೆ.
Comments