ನಟ ವಿಷ್ಣು ಮನೆಗೆ ಹೋದ ಅಂಬಿ: ಕಾರಣ ಏನು ಗೊತ್ತಾ?

ನಟ ಅಂಬರೀಶ್ ತುಂಬಾ ವರ್ಷಗಳ ಬಳಿಕ ತನ್ನ ಆತ್ಮೀಯ ಗೆಳೆಯ ವಿಷ್ಣುವರ್ಧನ್ ಮನೆಗೆ ಭೇಟಿಯನ್ನು ಕೊಟ್ಟಿದ್ದಾರೆ.ಅಂಬರೀಶ್ ನಟನೆಯ ಅಂಬಿ ನಿಂಗ್ ವಯಸ್ಸಾಯತೋ ಚಿತ್ರೀಕರಣ ಜಯನಗರದಲ್ಲಿ ನಡೆಯುತ್ತಿದೆ. ಈ ವೇಳೆ ಹತ್ತಿರದಲ್ಲೇ ಇದ್ದ ಸಾಹಸಸಿಂಹ ವಿಷ್ಣುವರ್ಧನ್ ಮನೆಗೆ ಬೇಟಿ ನೀಡಿ ಎಲ್ಲರ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ.
ಅಂಬರೀಶ್ ಸದ್ಯ ರಾಜಕೀಯದಿಂದ ದೂರ ಉಳಿದಿದ್ದು, ಅಂಬಿ ನಿಂಗ್ ವಯಸ್ಸಾಯತ್ತೋ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ.ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಜೂನಿಯರ್ ಅಂಬಿಯಾಗಿ ಕಾಣಿಸಿಕೊಳ್ಳಲಿದ್ದು, ಕಿಚ್ಚನಿಗೆ ಜೋಡಿಯಾಗಿ ಶೃತಿ ಹರಿಹರನ್ ನಟಿಸುತ್ತಿದ್ದಾರೆ. ಜಾಕ್ ಮಂಜು ನಿರ್ಮಾಣದಲ್ಲಿ ಗುರುದತ್ತ್ ಗಾನಿಗ ಕಲ್ಪನೆಯಲ್ಲಿ ಚಿತ್ರ ಮೂಡಿಬರುತ್ತಿದೆ.ಈ ಚಿತ್ರ ತೆರೆ ಮೇಲೆ ಯಾವ ರೀತಿ ಮೂಡಿ ಬರಲಿದೆ ಅನ್ನೊದನ್ನ ಕಾದು ನೊಡಬೇಕಿದೆ.
Comments