ಕ್ರಿಶ್ಚಿಯನ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಿರು-ಮೇಘನಾ

30 Apr 2018 12:25 PM | Entertainment
510 Report

ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಅವರು ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರಿನಲ್ಲಿರುವ ಕೋರಮಂಗಲದ ಸೇಂಟ್ ಆಂಥೋನಿಸ್ ಫೈರಿ ಚರ್ಚ್ ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹ ಸಮಾರಂಭ ನೆರವೇರಿತು. ಬಂಧುಗಳು, ಕುಟುಂಬದವರು, ಹಾಗೂ ಆತ್ಮೀಯರು ಮಾತ್ರ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಚಿತ್ರರಂಗದ ಗಣ್ಯರು, ಕಲಾವಿದರು ವಧುವರರಿಗೆ ಶುಭಕೋರಿದ್ದಾರೆ. ಮೇ 2 ರಂದು ಹಿಂದೂ ಸಂಪ್ರದಾಯದಂತೆ ಅರಮನೆ ಮೈದಾನದಲ್ಲಿ ಇವರ ವಿವಾಹ  ಇನ್ನೊಮ್ಮೆ ನಡೆಯಲಿದೆ. 

Edited By

Manjula M

Reported By

Manjula M

Comments