'ದಿ ವಿಲನ್' ಚಿತ್ರದ ವಿಲನ್ ಯಾರು ಗೊತ್ತಾ?
ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಚಿತ್ರವಾದ 'ದಿ ವಿಲನ್' ಚಿತ್ರದಲ್ಲಿ ವಿಲನ್ ಯಾರು ಎಂಬ ಪ್ರಶ್ನೆಗೆ ಇದೀಗ ನಟ ಶಿವರಾಜ್ ಕುಮಾರ್ ಅವರಿಂದ ಪರೋಕ್ಷವಾಗಿಯೇ ಉತ್ತರ ಸಿಕ್ಕಿದಂತೆ ಆಗಿದೆ.
ಎಸ್.. ಜೋಗಿ ಪ್ರೇಮ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ದಿ ವಿಲನ್' ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅವರು ಜೊತೆಯಾಗಿ ಅಭಿನಯಿಸುತ್ತಿರುವ ವಿಷಯ ಎಲ್ಲರಿಗೂ ಕೂಡ ತಿಳಿದೇ ಇದೆ. ಆದರೆ ಈ ಚಿತ್ರದಲ್ಲಿ ಸುದೀಪ್ ಹಾಗೂ ಶಿವಣ್ಣ ಇವರಿಬ್ಬರಲ್ಲಿ ವಿಲನ್ ಯಾರು ಎಂಬ ಗೊಂದಲ ಎಲ್ಲರಲ್ಲಿಯೂ ಕೂಡ ಮನೆ ಮಾಡಿತ್ತು. ಆದರೆ ಡಾ. ರಾಜ್‍ಕುಮರ್ ಅವರ ಹುಟ್ಟುಹಬ್ಬದ ದಿನದಂದು ದಿ-ವಿಲನ್ ಸಿನಿಮಾ ಕುರಿತಾಗಿ ಎದುರಾದ ಪ್ರಶ್ನೆಗೆ ನಟ ಶಿವರಾಜ್ ಕುಮಾರ್ ಅವರು,' ನಾನು ಎಷ್ಟು ದಿನ ಒಳ್ಳೆಯವನಾಗಿರಲಿ. ಆದ್ರೆ ಒಮ್ಮೆಯಾದರು ವಿಲನ್ ಆಗುತ್ತೀನಿ' ಎಂದು ಉತ್ತರವನ್ನು ನೀಡಿದ್ದಾರೆ.ಈ ಉತ್ತರ ಕೇಳಿದ ಅಭಿಮಾನಿಗಳಿಗೆ ದಿ ವಿಲನ್ ಸಿನಿಮಾದಲ್ಲಿ ಇವರೇ ನಿಜವಾದ ವಿಲನ್ ನ? ಎಂಬ ಸಂಶಯ ಅಭಿಮಾನಿಗಳಲ್ಲಿ ಮೂಡಿದೆ. ಆದರೆ ಇದೆಲ್ಲದಕ್ಕೂ ಉತ್ತರ ಸಿನಿಮಾ ರಿಲೀಸ್ ಆಗುವವರೆಗೂ ಕೂಡ ಕಾಯಲೇಬೇಕು.
Comments