ಪತ್ನಿಯ ನಟನೆಯನ್ನು ನೋಡಿ ಬಂದ ನಟ ಅಂಬರೀಶ್
ನಟ ಅಂಬರೀಶ್ ಅವರು 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬಿಜಿ ಇದ್ದಾರೆ. ಬಹಳ ವರ್ಷಗಳ ನಂತರ ಅಂಬರೀಶ್ ಮತ್ತೆ ಹೀರೋ ಆಗಿ ನಟಿಸುತ್ತಿದ್ದು ಸಿನಿಮಾದ ಮೇಲೆ ಸ್ವಲ್ಪ ಹೆಚ್ಚಾಗಿಯೇ ನಿರೀಕ್ಷೆ ಇದೆ.ಈ ಕಡೆ ಅಂಬರೀಶ್ ಪತ್ನಿ ನಟಿ ಸುಮಲತಾ ಮತ್ತೊಂದು ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿದ್ದಾರೆ. 'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ನಟಿ ಸುಮಲತಾ ನಟಿಸುತ್ತಿದ್ದಾರೆ.
'ತಾಯಿಗೆ ತಕ್ಕ ಮಗ' ಸಿನಿಮಾದ ಚಿತ್ರಿಕರಣ ಭರ್ಜರಿಯಾಗಿ ನಡೆಯುತ್ತಿದೆ. ಸಿನಿಮಾದ ಚಿತ್ರೀಕರಣದ ಸೆಟ್ ಗೆ ಈಗ ನಟ ಅಂಬರೀಶ್ ಬೇಟಿಯನ್ನು ಕೊಟ್ಟಿದ್ದಾರೆ. ಚಿತ್ರತಂಡದ ಜೊತೆಗೆ ಕೆಲ ಸಮಯ ಕಾಲವನ್ನು ಕಳೆದು ಒಂದು ಒಳ್ಳೆ ಫೋಟೋವನ್ನು ತೆಗೆದುಕೊಂಡಿದ್ದಾರೆ ಅಂಬರೀಶ್. ಪತ್ನಿಯ ನಟನೆಯನ್ನು ಅಂಬಿ ನೋಡಿಕೊಂಡು ಬಂದಿದ್ದಾರೆ. ಲಾಯರ್ ಪಾತ್ರದಲ್ಲಿ ಸುಮಲತಾ ಅವರು ನಟಿಸಿಸುತ್ತಿದ್ದಾರೆ.'ತಾಯಿಗೆ ತಕ್ಕ ಮಗ' ಅಜಯ್ ರಾವ್ ಅವರ 25ನೇ ಸಿನಿಮಾವಾಗಿದೆ. ವಿಶೇಷ ಅಂದರೆ 'ಎಕ್ಸ್ ಕ್ಯೂಸ್ ಮಿ' ಸಿನಿಮಾದ ನಂತರ ಮತ್ತೆ ಈ ಚಿತ್ರದಲ್ಲಿ ಅಜಯ್ ಹಾಗೂ ಸುಮಲತಾ ತಾಯಿ ಮಗನಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಪಾತ್ರಕ್ಕಾಗಿ ಅಜಯ್ ರಾವ್ ತಾಯಿಯಾಗಿ ಕಾಣಿಸಿಕೊಂಡಿರುವ ಸುಮಲತಾ ಅವರ ಟ್ಯಾಟೂ ಹಾಕಿಸಿಕೊಂಡಿದ್ದಾರೆ.'ತಾಯಿಗೆ ತಕ್ಕ ಮಗ' ಸಿನಿಮಾಗೆ ವೇದಗುರು ಅವರು ಆಕ್ಷನ್ ಕಟ್ ಹೇಳಿದ್ದಾರೆ. ಆಶಿಕಾ ರಂಗನಾಥ್ ಈ ಚಿತ್ರದ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
Comments