ಮೊದಲ ಪ್ರಶಸ್ತಿ ಬಂದ ಖುಷಿಯಲ್ಲಿ ಕಣ್ ಸನ್ನೆ ಹುಡುಗಿ ಪ್ರಿಯಾ
ಕಣ್ಸನ್ನೆಯ ಮೂಲಕವೇ ರಾತ್ರೋ ರಾತ್ರಿ ಹೆಸರು ಮಾಡಿದ್ದ ಪ್ರಿಯಾ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಒಂದೆ ರಾತ್ರಿಗೆ ಲಕ್ಷಾಂತರ ಅಭಿಮಾನಿಗಳನ್ನ ಗಳಿಸಿದ್ದ ಪ್ರಿಯಾ ಇದೀಗ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ.
ಪ್ರಿಯಾ ಈಗ ತಮ್ಮ ಕರಿಯರ್'ನ ಮೊದಲ ಪ್ರಶಸ್ತಿ ಬಂದ ಸಂಭ್ರಮದಲ್ಲಿದ್ದಾರೆ. ಒರು ಅಡರ್ ಲವ್ ಎಂಬ ಮಲಯಾಳಂ ಚಿತ್ರದ ಹಾಡಿನ ಮೂಲಕ ಲಕ್ಷಾಂತರ ಅಭಿಮಾನಿಗಳು ಪ್ರಿಯಾಗೆ ಲೀಸ್ಟ್ ಗೆ ಸೇರಿಕೊಂಡರು.. ಹುಬ್ಬು ಹಾರಿಸಿ ಹಾಡೊಂದರಿಂದಲೇ ಪಡ್ಡೆಗಳ ಹೃದಯಕ್ಕೆ ಲಗ್ಗೆ ಇಟ್ಟಿದ್ದ ಪ್ರಿಯಾ ನಟನೆ ಎನ್ನರನ್ನೂ ಕೂಡ ಕ್ಲೀನ್ ಬೋಲ್ಡ್ ಮಾಡಿತ್ತು ಎಂದರೆ ತಪ್ಪಾಗುವುದಿಲ್ಲ. ಈ ತರಹ ಫ್ಯಾನ್'ಗಳಿಗೆ ಕ್ರೇಜ್ ಹುಟ್ಟಿಸಿದ್ದ ಪ್ರಿಯಾಗೆ ಚಿತ್ರ ಬಿಡುಗಡೆಯಾಗುವುದರ ಮೊದಲೇ ಪ್ರಶಸ್ತಿಯೊಂದನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ವಿಷಯವನ್ನು ಸ್ವತಃ ಪ್ರಿಯಾ ಅವರೇ ತಮ್ಮ ಇನ್'ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯಾ ವಾರಿಯರ್ ಗೆ ವೈರಲ್ ಪರ್ಸನಾಲಿಟಿ ಆಫ್ ದಿ ಇಯರ್ ಪ್ರಶಸ್ತಿ ದೊರಕಿದೆ. ಈ ನಟಿ ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಇನ್ನಷ್ಟು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಳ್ಳಲ್ಲಿ ಎಂದು ಆಶಿಸೋಣ.
Comments