ದರ್ಶನ್ ಜೊತೆ ಸಿನಿಮಾ ಮಾಡಲು ರೆಡಿ ಎಂದ ಸುದೀಪ್

ಬಣ್ಣದ ಲೋಕದಲ್ಲಿ ಘಟಾನುಘಟಿಗಳು ಒಂದೆ ಸಿನಿಮಾದಲ್ಲಿ ಅಭಿನಯಿಸೋದು ಸ್ವಲ್ಪ ರೇರ್..ಅಂತಹುದರಲ್ಲಿ ಸ್ಯಾಂಡಲ್ ವುಡ್ ನ ಬಿಗ್ ಸ್ಟಾರ್ ಗಳಾದ ಚಾಲೆಂಜಿಂಗ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರ ಎಂಬ ಅಭಿಮಾನಿಯ ಪ್ರಶ್ನೆಗೆ ಸುದೀಪ್ ಉತ್ತರಿಸಿದ್ದು, ಒಳ್ಳೆಯ ಕಥೆ ಸಿಕ್ಕರೆ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಇಬ್ಬರು ನಾಯಕರ ನಡುವೆ ಸ್ಟಾರ್ ವಾರ್ ನಡೆಯುತ್ತಿದೆ ಎಂದು ಹೇಳಲಾಗುತ್ತಿತ್ತು. ಈ ಕುರಿತು ದರ್ಶನ್ ಅಭಿಮಾನಿಯೊಬ್ಬರು ಸುದೀಪ್ ಅವರಿಗೆ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನಲ್ಲಿ ದರ್ಶನ್ ಅವರ ಜೊತೆ ಸಿನಿಮಾ ಮಾಡುತ್ತೀರಾ? ಕನ್ನಡದಲ್ಲಿ ನಿಮ್ಮ ನಡುವೆ ಉತ್ತಮ ಸಂಬಂಧವಿಲ್ಲ ಎಂಬ ಮಾಹಿತಿ ಲಭಿಸಿದೆ. ನಾನು ನಿಮ್ಮಿಬ್ಬರ ಅಭಿಮಾನಿಯಾಗಿದ್ದು, ದರ್ಶನ್ ಅವರೊಂದಿಗೆ ಒಂದು ಸಿನಿಮಾ ಮಾಡುತ್ತೀರಾ ಅಣ್ಣ ಎಂದು ಕೇಳಿದ್ದರು. ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ಸುದೀಪ್ ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದು ದರ್ಶನ್ ಹಾಗೂ ನಾನು ಉತ್ತಮ ಸ್ನೇಹಿತರು. ಇಬ್ಬರಿಗೆ ಒಪ್ಪಿಗೆಯಾಗುವ ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಸುದೀಪ್ ಅವರ ಈ ಟ್ವೀಟ್ ನೊಂದಿಗೆ ಅಭಿಮಾನಿಗಳಲ್ಲ್ಲಿ ಇದ್ದಂತಹ ಹಲವು ಸಂದೇಹಗಳು ದೂರವಾಗಿದೆ. ಒಂದೊಮ್ಮೆ ಒಳ್ಳೆಯ ಕಥೆಯೊಂದಿಗೆ ದರ್ಶನ್ ಹಾಗೂ ಸುದೀಪ್ ಸ್ಕ್ರೀನ್ ಶೇರ್ ಮಾಡಿದರೆ ಬಾಕ್ಸ್ ಆಫೀಸ್ ಚಿಂದಿಯಾಗಲಿದೆ. ಅದಷ್ಟು ಬೇಗ ಇಬ್ಬರು ತೆರೆ ಮೇಲೆ ಒಂದಾಗಿ ಕಾಣಿಸಿಕೊಳ್ಳಲಿ ಎಂಬುವುದು ಅಭಿಮಾನಿಗಳು ಆಸೆ ಕೂಡ ಆಗಿದೆ.
Comments