ಬಾಲಿವುಡ್ ಬ್ಯೂಟಿ ಶ್ರದ್ಧಾ ಕಪೂರ್ ಮದುವೆ ಆಗ್ತಿದ್ದಾರಾ?
ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲ..ಬಾಲಿವುಡ್'ನಲ್ಲಿ ಮದುವೆ ಸೀಜನ್ ಶುರುವಾಗಿದೆ.ಕೆಲ ತಿಂಗಳ ಹಿಂದಷ್ಟೇ ಕ್ರಿಕೆಟಿಗ ವಿರಾಟ್ ಕೋಹ್ಲಿ ಜೊತೆ ಅನುಷ್ಕಾ ಶರ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನೇನು ಕೆಲ ದಿನಗಳಲ್ಲೇ ರಣ್ವೀರ್ ಹಾಗೂ ದೀಪಿಕಾ ಪಡುಕೋಣೆ ವಿವಾಹ ಮಾಡಿಕೊಳ್ಳಲಿದ್ದಾರೆ. ಇನ್ನು ಸೋನಮ್ ಕಪೂರ್ ಕೂಡ ಗೆಳೆಯ ಆನಂದ್ ಅಹುಜಾ ಜೊತೆಗೆ ಮದುವೆಯಾಗಲು ರೆಡಿಯಾಗಿದ್ದಾರೆ.
ಈ ಸಾಲಿಗೆ ಶ್ರದ್ಧಾ ಕಪೂರ್ ಕೂಡ ಸೇರುತ್ತಾರಾ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಅದಕ್ಕೆ ಕಾರಣವಾಗಿರುವುದು ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಾಕಿಕೊಂಡಿರುವ ಸ್ಟೇಟಸ್ ಬಣ್ಣದ ಲೆಹಾಂಗಾವನ್ನು ಇರಿಸಿಕೊಂಡು ಗೆಟ್ಟಿಂಗ್ ರೆಡಿ ಫಾರ್ ಬಿಗ್ಗೆಸ್ಟ್ ಹಳದಿ ಸೆರೆಮನಿ ಎಂದು ಹಾಕಿಕೊಂಡಿದ್ದಾರೆ. ಈ ಮೂಲಕ ಬಾಲಿವುಡ್ ನಲ್ಲಿ ಮದುವೆ ಯಾಗುತ್ತಿರುವವರ ಸಾಲಿಗೆ ಶ್ರದ್ಧಾ ಕೂಡ ಸೇರುತ್ತಾರಾ ಎನ್ನುವ ಕುತೂಹಲ ಮೂಡಿದೆ. ಶ್ರದ್ಧಾ ಕಪೂರ್ ಬಾಯ್ ಫ್ರೆಂಡ್ ಬಗ್ಗೆ ಈ ಹಿಂದೆ ಅನೇಕ ಬಾರಿ ಗುಸು ಗುಸು ಕೇಳಿ ಬಂದಿತ್ತು. ಶ್ರದ್ಧಾ ಜೊತೆ ಆಶಿಕಿ 2 ಚಿತ್ರದಲ್ಲಿ ನಟಿಸಿರುವ ಆದಿತ್ಯ ರಾಯ್ ಕಪೂರ್ ಜೊತೆಗೂ ಅವರ ಹೆಸರು ಕೇಳಿ ಬರುತ್ತಿತ್ತು.. ಆದರೆ ಎಂದಿಗೂ ಕೂಡ ಶ್ರದ್ಧ ಇಂತಹ ಗಾಸಿಪ್'ಗಳಿಗೆ ಸೊಪ್ಪು ಹಾಕಿಲ್ಲ ಅನ್ನೋದೆ ವಿಷಯ.
Comments