ಮತ್ತೊಂದು ಬಿರುದನ್ನು ಮುಡಿಗೇರಿಸಿಕೊಂಡ ಹ್ಯಾಟ್ರಿಕ್ ಹೀರೋ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಂದರೆ ಹುಚ್ಚೆದು ಕುಣಿಯುವ ಅಭಿಮಾನಿಗಳಿಗೇನು ಕಡಿಮೆ ಇಲ್ಲ. ಶಿವಣ್ಣ ಅಭಿನಯದ ಸಿನಿಮಾಗಳೆಲ್ಲವೂ ಸೂಪರ್ ಹಿಟ್ ಪಟ್ಟಿಯಲ್ಲೆ ಇರುತ್ತವೆ.. ಶಿವರಾಜ್ ಕುಮಾರ್ ಅಭಿಮಾನಿಗಳು ಕೇವಲ ಜಿಲ್ಲೆ ಹಾಗೂ ರಾಜ್ಯದಲ್ಲಿ ಮಾತ್ರವಲ್ಲ.. ಹೊರದೇಶದಲ್ಲೂ ಕೂಡ ಇದ್ದಾರೆ.
ಹೊರ ದೇಶಗಳಲ್ಲೂ ಶಿವಣ್ಣನ ಅಭಿಮಾನಿಗಳು ತುಂಬಾ ಜನರಿದ್ದಾರೆ. ಟಗರು ಸಿನಿಮಾದ ಸಂಭ್ರಮದಲ್ಲಿರುವ ಶಿವಣ್ಣ ವಿದೇಶದಲ್ಲಿರುವ ಭಾರತೀಯರ ಜೊತೆ ಚಿತ್ರ ನೋಡಲು ಪ್ರಯಾಣ ಬೆಳಸಿದ್ದಾರೆ. ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಧನಂಜಯ ಹಾಗೂ ನಿರ್ಮಾಪಕ ಕೆ ಪಿ ಶ್ರೀಕಾಂತ್ ಮಸ್ಕಟ್ ನಲ್ಲಿ ಅಲ್ಲಿಯ ಅಭಿಮಾನಿಗಳ ಜೊತೆ ಚಿತ್ರ ನೋಡಿದ್ದಾರೆ. ಸಿನಿಮಾ ಪ್ರದರ್ಶನದ ನಂತರ ಅಲ್ಲಿಯ ಭಾರತೀಯರು ಹ್ಯಾಟ್ರಿಕ್ ಹೀರೋಗೆ ಹೊಸ ಬಿರುದು ನೀಡಿದ್ದಾರೆ. ಗ್ಲೋಬಲ್ ಸ್ಟಾರ್ ಎಂದು ಬಿರುದು ನೀಡಿ ಗೌರವಿಸಿದ್ದಾರೆ. ಶಿವಣ್ಣನಿಗೆ ಈ ಗೌರವ ಸಂದಿರುವುದು ಅಭಿಮಾನಿಗಳಿಗೆ ಖುಷಿಯನ್ನುಂಡು ಮಾಡಿದಲ್ಲದೆ ಚಿತ್ರರಂಗಕ್ಕೂ ಕೂಡ ಖುಷಿಯಾಗಿದೆ.
Comments