ಆರಾಧ್ಯ ಅಭಿಷೇಕ್ ಬಚ್ಚನ್ ಗೆ ಏನ್ ಶಾಕ್ ಕೊಟ್ಲು ಗೊತ್ತಾ?

ಸಿನಿಮಾರಂಗದಲ್ಲಿ ಇರುವವರು ಫ್ಯಾಮಿಲಿ ಜೊತೆ ಟೈಮ್ ಪಾಸ್ ಮಾಡೋದು ಕಡಿಮೆನೆ..? ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ಸಿನಿಮಾದ ಶೂಟಿಂಗ್ ಗಾಗಿ ಕುಟುಂಬದವರಿಂದ ದೂರವಿದ್ದು ನಂತರ ತಮ್ಮ ಕಚೇರಿಗೆ ವಾಪಾಸ್ಸಾದಾಗ ಅವರಿಗೊಂದು ಅಚ್ಚರಿಯೇ ಕಾದಿತ್ತು… ಆ ಅಚ್ಚರಿ ಏನು ಗೊತ್ತಾ? ಮುಂದೆ ಓದಿ.
ನಟ ಅಭಿಷೇಕ್ ಬಚ್ಚನ್ ಅವರು ಅನುರಾಗ್ ಕಶ್ಯಪ್ ಅವರ 'ಮನ್ ಮರ್ಜಿಯಾನ್' ಚಿತ್ರದಲ್ಲಿ ನಟಿಸುತ್ತಿದ್ದು, ಆ ಚಿತ್ರದ ಶೂಟಿಂಗ್ ಗಾಗಿ ಎರಡು ತಿಂಗಳ ಕಾಲ ಕಾಶ್ಮೀರಕ್ಕೆ ಹೋಗಿದ್ದರು. ಎರಡು ತಿಂಗಳ ಬಳಿಕ ತಮ್ಮ ಕಚೇರಿಗೆ ಬಂದಾಗ ಅವರಿಗಾಗಿ ಒಂದು ಅಚ್ಚರಿಯೇ ಎದುರಾಗಿತ್ತು ಅದೇನೆಂದರೆ ಅವರ ಮಗಳು ಆರಾಧ್ಯ ನೋಟ್ ಬುಕ್ ನಲ್ಲಿ ತಂದೆಗೆ ವೆಲ್ ಕಮ್ ಎಂದು ಬರೆದಿದ್ದಳು. ಇದನ್ನು ನೋಡಿ ಸಂತೋಷಗೊಂಡ ನಟ ಅಭಿಷೇಕ್ ಅವರು ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ಫೋಟೋವನ್ನು ಶೇರ್ ಕೂಡ ಮಾಡಿದ್ದಾರೆ.
Comments