ನೋ ಹೀರೋ… ನೋ ಹೀರೋಹಿನ್… ಆದರೂ ನಡಿತಿದೆ 'ಕೋಟಿಗೊಬ್ಬ 3' ಚಿತ್ರದ ಶೂಟಿಂಗ್

ಕಿಚ್ಚ ಸುದೀಪ್ ಅವರ ಇನ್ ಬಾಕ್ಸ್ ನಲ್ಲಿರುವ ಮುಂದಿನ ಸಿನಿಮಾಗಳಲ್ಲಿ 'ಕೋಟಿಗೊಬ್ಬ 3' ಕೂಡ ಒಂದು. ಈ ಸಿನಿಮಾದ ಶೂಟಿಂಗ್ ಇದೀಗ ಶುರು ಆಗಿದ್ದು ಕಳೆದ ಬುಧವಾರ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ನಾಯಕ ಸುದೀಪ್ ಮತ್ತು ನಾಯಕಿ ಇಲ್ಲದೆಯೇ ಶೂಟಿಂಗ್ ಶುರು ಮಾಡಿರುವುದೇ ಮತ್ತೊಂದು ಹೈಲೇಟ್ ಆಗಿದೆ.
'ಕೋಟಿಗೊಬ್ಬ 2' ಸಿನಿಮಾದ ಯಶಸ್ಸಿನ ನಂತರ ಸುದೀಪ್ ಮತ್ತು ನಿರ್ಮಾಪಕ ಸೂರಪ್ಪ ಬಾಬು ಕಾಂಬಿನೇಶನ್ ನಲ್ಲಿ ಬರುತ್ತಿರುವ ಸಿನಿಮಾ 'ಕೋಟಿಗೊಬ್ಬ 3'. ಯುವ ನಿರ್ದೇಶಕರಾದ ಶಿವ ಕಾರ್ತಿಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದ ಮುಹೂರ್ತವು ಮೇ 2 ರಂದು ನಡೆಯಲಿದ್ದು ಸದ್ಯಕ್ಕೆ ಸಿನಿಮಾದ ಕೆಲವು ಚಿಕ್ಕ ಪುಟ್ಟ ದೃಶ್ಯಗಳ ಚಿತ್ರೀಕರಣ ಶುರುವಾಗಿದೆ. ನಟ ಸುದೀಪ್ ಇನ್ನೂ 'ಕೋಟಿಗೊಬ್ಬ 3' ಅಡ್ಡಕ್ಕೆ ಎಂಟ್ರಿ ಕೊಟ್ಟಿಲ್ಲ. ಅವರ ಸೀನ್ ಹೊರತಾಗಿ ಇರುವ ದೃಶ್ಯಗಳನ್ನು ಈಗ ಚಿತ್ರತಂಡ ಸೆರೆ ಹಿಡಿಯುತ್ತಿದೆ. ಸಮಯಕ್ಕೆ ವೇಳೆಗೆ ಶೂಟಿಂಗ್ ಮುಗಿಸುವ ದೃಷ್ಟಿಯಿಂದ ಈ ತರ ಮಾಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಮತ್ತೊಂದು ವಿಷಯ ಏನು ಗೊತ್ತಾ?, 'ಕೋಟಿಗೊಬ್ಬ 3' ಸಿನಿಮಾದ ನಾಯಕಿ ಕೂಡ ಸದ್ಯಕ್ಕೆ ಇನ್ನೂ ಆಯ್ಕೆ ಆಗಿಲ್ಲ.
Comments