ಈ 'ಸಿಕ್ಸ್ ಪ್ಯಾಕ್' ಹುಡುಗ ಯಾರು ಗೊತ್ತಾ?

26 Apr 2018 4:11 PM | Entertainment
550 Report

ಸಿಕ್ಕಾಪಟ್ಟೆ ಹ್ಯಾಂಡ್ ಸಮ್, ಸಿಕ್ಸ್ ಪ್ಯಾಕ್ ಬಾಡಿ ಬೇರೆ, ಒಳ್ಳೆ ಹೈಟು...ಇಷ್ಟಿದ್ರೆ ಸಾಕು ಅಲ್ವಾ ಹೀರೋ ಆಗೋಕೆ.. ಹೌದು, ಈ ಸಿಕ್ಸ್ ಪ್ಯಾಕ್ ಹುಡುಗ ಸದ್ಯದಲ್ಲೇ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.

ಯಾರೂ ಈ ಹೀರೋ ಅಂತಿದೀರಾ. ಈತನ ಹೆಸರು ಅಭಿಷೇಕ್. ಕನ್ನಡ ಚಿತ್ರರಂಗದ ಕ್ರೇಜಿಕ್ವೀನ್ ರಕ್ಷಿತಾ ಅವರ ಪ್ರೀತಿಯ ತಮ್ಮ. ಬಣ್ಣದ ಲೋಕಕ್ಕೆ  ಬರಲು  ತಯಾರಿ ನಡೆಸುತ್ತಿರುವ  ಅಭಿಷೇಕ್ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅಂದ್ಹಾಗೆ, ರಕ್ಷಿತಾ ಪ್ರೇಮ್ ಸಹೋದರ ಅಭಿಷೇಕ್ ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ಧಾರೆ.  ಪ್ರೇಮ್ ನಿರ್ದೇಶನ ಮಾಡುತ್ತಿರುವ 'ದಿ ವಿಲನ್' ಚಿತ್ರದಲ್ಲಿ ಅಭಿಷೇಕ್ ಕೆಲಸವನ್ನು ಮಾಡುತ್ತಿದ್ದಾರೆ. ಡೈರೆಕ್ಟರ್ ಪ್ರೇಮ್ ಬಳಿ ಸಹಾಯಕ ನಿರ್ದೇಶಕನಾಗಿ ಅಭಿಷೇಕ್ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಆದ್ರೆ, ಹೀರೋ ಆಗಿ ಬೆಳ್ಳಿತೆರೆ ಪ್ರವೇಶ ಮಾಡುವುದಷ್ಟೇ ಬಾಕಿಯಿದೆ. ನ್ಯೂಯಾರ್ಕ್ ನ 'ಲೀ ಸ್ಟ್ರಾಸ್ಬರ್ಗ್ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ತರಬೇತಿ ಪಡೆದಿರುವ ಅಭಿಷೇಕ್, ಸಿನಿಮಾ ಮೇಕಿಂಗ್ ಕುರಿತ ಎಲ್ಲ ವಿಚಾರಗಳನ್ನು ಪ್ರೇಮ್ ಬಳಿ 'ದಿ ವಿಲನ್' ಸೆಟ್ ನಲ್ಲಿ ಕಲಿತಿದ್ದಾರಂತೆ.

 

Edited By

Manjula M

Reported By

Manjula M

Comments