ನಟಿ ಮೇಘನಾ ಅರಿಶಿಣ ಶಾಸ್ತ್ರದ ಫೋಟೊಗಳು ಸಖತ್ ಆಗಿವೆ..!





ಸ್ಯಾಂಡಲ್ ವುಡ್ ನಲ್ಲಿ ಮದುವೆ ಸಂಭ್ರಮದ ಕಳೆ ಕಟ್ಟಿದ್ದಾರೆ. ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಮದುವೆಗೆ ಇನ್ನು ಒಂದು ವಾರವಷ್ಟೆ ಇದೆ. ಎರಡು ಕುಟುಂಬದ ಸಂಪ್ರದಾಯಗಳಂತೆ ಮದುವೆ ಕಾರ್ಯಕ್ರಮಗಳು ನಡೆಯುತ್ತಿದೆ. ಇದೇ ಕಾರಣಕ್ಕಾ ಈಗಾಗಲೇ ಮೇಘನಾ ರಾಜ್ ಅವರ ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ.
ಮುಂಜಾನೆಯೇ ವಧು ಮೇಘನಾ ರಾಜ್ ಚಪ್ಪರ ಕಂಬಕ್ಕೆ ಪೂಜೆ ಸಲ್ಲಿಸುವ ಮೂಲಕ ಚಪ್ಪರ ಹಾಕುವ ಕಾರ್ಯಕ್ರಮವನ್ನು ಮಾಡಿದ್ದಾರೆ. ಮೇಘನಾ ಮನೆಯಂಗಳದಲ್ಲಿ ಈಗಾಗಲೇ ಚಪ್ಪರ ಸಿದ್ದವಾಗಿದೆ. ಅದರ ಬೆನ್ನಲ್ಲೇ ಅರಿಶಿನ ಶಾಸ್ತ್ರವನ್ನು ಕೂಡ ಮಾಡಿದ್ದಾರೆ. ಹಿಂದೂ ಸಂಪ್ರದಾಯದಂತೆ ಶಾಸ್ತ್ರಗಳು ನಡೆದಿದ್ದು ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯಿ ಅವರ ಕುಟುಂಬಸ್ಥರೆಲ್ಲರೂ ಸೇರಿ ಮೇಘನಾಗೆ ಅರಿಶಿನ ಹಚ್ಚಿ ಶಾಸ್ತ್ರವನ್ನು ಮಾಡಿದ್ದಾರೆ. ಮನೆಯ ಮುಂಭಾಗದಲ್ಲಿ ಸಿದ್ದವಾಗಿದ್ದ ವೇದಿಕೆಯಲ್ಲಿ ಎಲ್ಲರೂ ಸೇರಿ ಸಂಪ್ರದಾಯಬದ್ಧವಾಗಿ ಅರಿಶಿನ ಹಚ್ಚಲಾಯ್ತು. ಎಂ. ಕೆ ಸುಂದರ್‌ರಾಜ್ ಹಾಗೂ ಪ್ರಮೀಳಾ ಜೋಷಾಯ್ ಮನೆಯಲ್ಲಿ ವಿಶೇಷವಾದ ಕಳೆ ತುಂಬಿದೆ. ಏಪ್ರಿಲ್ 25ರ ಮುಂಜಾನೆ ಹಿಂದೂ ಸಂಪ್ರದಾಯದಂತೆ ವಧು ಮೇಘನಾ ರಾಜ್ ಚಪ್ಪರ ಕಂಬಕ್ಕೆ ಪೂಜೆ ಸಲ್ಲಿಸಿದ್ದು ಶಾಸ್ತ್ರದ ಕೆಲವು ಫೋಟೋಗಳು ಇಲ್ಲಿವೆ ಅಲ್ಲದೆ ಈಗಾಗಲೇ ಮನೆಯಂಗಳದಲ್ಲಿ ಚಪ್ಪರ ಕೂಡ ಸಿಂಗಾರಗೊಂಡಿದೆ. ಚಪ್ಪರ ಶಾಸ್ತ್ರದ ಬಳಿಕ ನಟಿ ಮೇಘನಾ ಅರಿಶಿಣ ಶಾಸ್ತ್ರವನ್ನು ಮಾಡಿದ್ದಾರೆ.ಮೇ 2ರಂದು ನಟ ಚಿರಂಜೀವಿ ಸರ್ಜಾ ಹಿಂದೂ ಸಂಪ್ರದಾಯದಂತೆ ನಟಿ ಮೇಘನಾರನ್ನು ವಿವಾಹವಾಗಲಿದ್ದಾರೆ. ಅರಮನೆ ಮೈದಾನದಲ್ಲಿ ಬೆಳಗ್ಗೆ 10.30ರ ಶುಭ ಲಗ್ನದಲ್ಲಿ ಮುಹೂರ್ತ ನೆರವೇರಲಿದ್ದು, ಅದೇ ದಿನ ಸಂಜೆ 7 ಗಂಟೆಗೆ ಆರತಕ್ಷತೆಯನ್ನುಕೂಡ ನಡೆಸಲಾಗುತ್ತದೆ
Comments