ಡಿ-ಬಾಸ್ ನ ಗುಣವನ್ನು ಹೊಗಳಿದ ಶಂಕರ್ ಅಶ್ವತ್

ಕನ್ನಡದ ಹಿರಿಯ ನಟ ಅಶ್ವಥ್ ಪುತ್ರ ಶಂಕರ್ ಅಶ್ವಥ್ ಸಿನಿಮಾ ಅವಕಾಶ ಇಲ್ಲದೆ ಕ್ಯಾಬ್ ಓಡಿಸುತ್ತಿದ್ದ ವಿಷಯ ಎಲ್ಲರಿಗೂ ಕೂಡ ಗೊತ್ತು. ಪರಿಸ್ಥಿತಿ ತಿಳಿದ ಮೇಲೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ತಮ್ಮ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದ್ದರು. ಅದೇ ರೀತಿ ಈಗ ಶಂಕರ್ ಅಶ್ವತ್ 'ಯಜಮಾನ' ಸಿನಿಮಾದಲ್ಲಿ ಕೂಡ ಅಭಿನಯಿಸುತ್ತಿದ್ದಾರೆ.
ಚಿತ್ರದ ಚಿತ್ರೀಕರಣ ವೇಳೆ ದರ್ಶನ್ ಜೊತೆಗೆ ಕಾಲಕಳೆದಿರುವ ಶಂಕರ್ ಅಶ್ವತ್ ಈಗ ಡಿ ಬಾಸ್ ನ ಗುಣವನ್ನು ಕೊಂಡಾಡಿದ್ದಾರೆ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ದರ್ಶನ್ ಬಗ್ಗೆ ಬರೆದುಕೊಂಡಿರುವ ಶಂಕರ್ ಅಶ್ವತ್ ''ಒಬ್ಬ ಮೇರು ನಟ ಅತ್ಯಂತ ಉನ್ನತ ಮಟ್ಟಕ್ಕೆ ಬೆಳೆದರೂ ನಾನು ಎಲ್ಲರಂತೆ ಸಾಮಾನ್ಯನು ಎಂದು ನಿರೂಪಿಸಿ ಇನ್ನೂ ಎತ್ತರಕ್ಕೆ ಬೆಳೆದ ವ್ಯಕ್ತಿ ಶ್ರೀಯುತ ದರ್ಶನ್ ಅವರು'' ಎಂದು ಒಂದೇ ಸಾಲಿನಲ್ಲಿ ದರ್ಶನ್ ರನ್ನು ಹಾಡಿಹೊಗಳಿದ್ದಾರೆ. ಮತ್ತೊಂದು ಸಂತಸದ ವಿಷಯ ಏನೆಂದರೆ ಈ ಸಿನಿಮಾದ ನಂತರ ಶಂಕರ್ ಅಶ್ವತ್ ಅವರಿಗೆ ಬೇರೆ ಬೇರೆ ಸಿನಿಮಾಗಳ ಅವಕಾಶ ಕೂಡ ಸಿಕ್ಕಿದೆಯಂತೆ. ಈ ಕಾರಣದಿಂದ ದರ್ಶನ್ ಅವರಿಗೆ ಶಂಕರ್ ಅಶ್ವತ್ ಕೃತಜ್ಞತೆ ತಿಳಿಸಿದ್ದಾರೆ.
Comments