ಚುನಾವಣೆಯ ಬಿರುಸಿನಲ್ಲಿಯೂ ತೆರೆಗೆ ಬರಲಿವೆ ಈ ಚಿತ್ರಗಳು

ರಾಜ್ಯ ವಿಧಾನಸಭೆ ಚುನಾವಣೆಗೆ ಈಗಾಗಲೇ ದಿನಗಣನೆ ಶುರುವಾಗಿದ್ದು ಚುನಾವಣೆಯ ಬಿಸಿ ಕನ್ನಡ ಸಿನಿಮಾವರೆಗೆ ತಟ್ಟಿದೆ ಎಂದು ಹೇಳಬಹುದು. ಶುಕ್ರವಾರ ರಾಜಕೀಯಕ್ಕೆ ಸಂಬಂಧಪಟ್ಟ ಮೂರು ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆಯಾಗಲು ರೆಡಿಯಾಗಿವೆ.
ಏಪ್ರಿಲ್ 27ರಂದು ನಂಜೇಗೌಡ ನಿರ್ದೇಶನದ ಹೆಬ್ಬೆಟ್ಟು ರಾಮಕ್ಕ, ಅಶೋಕ್ ಕಶ್ಯಪ್ ನಿರ್ದೇಶನದ ಧ್ವಜ ಮತ್ತು ಟಿ.ಎಸ್.ನಾಗಾಭರಣ ನಿರ್ದೇಶನದ ಕಾನೂರಾಯಣ ಎಂಬ ಮೂರು ಚಿತ್ರಗಳು ಬಿಡುಗಡೆಯಾಗುತ್ತಿವೆ. ಇವೆಲ್ಲವೂ ರಾಜಕೀಯಕ್ಕೆ ಸಂಬಂಧಪಟ್ಟಂತಹ ಚಿತ್ರಗಳಾಗಿವೆ. ತಾರಾ ಅನುರಾಧ ಅಭಿನಯದ ಹೆಬ್ಬೆಟ್ಟು ರಾಮಕ್ಕ ಚಿತ್ರಕ್ಕೆ ಕಳೆದ ಸಾಲಿನ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿಯು ಕೂಡ ಸಿಕ್ಕಿದೆ. ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಬಗ್ಗೆ ಕಥೆ ಇರುವ ಚಿತ್ರವು ಇದಾಗಿದೆ. ಈ ಚಿತ್ರಗಳು ತೆರೆ ಮೇಲೆ ಯಾವ ರೀತಿ ಸಿನಿ ರಸಿಕರನ್ನು ಮನರಂಜಿಸುತ್ತವೆ ಅನ್ನೋದನ್ನ ಕಾದು ನೋಡಬೇಕಿದೆ.
Comments