ಅದ್ಧೂರಿ ಮದುವೆ ಬೇಡ ಎಂದ ಸೋನಂ ಕಪೂರ್..!
ಬಾಲಿವುಡ್ ನಟಿ ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ಮದುವೆ ಮೇ ತಿಂಗಳಿನಲ್ಲಿ ನೆರವೇರಲಿದೆ ಅನ್ನೋ ಸುದ್ದಿ ಈಗಾಗ್ಲೇ ವೈರಲ್ ಆಗಿದೆ. ಮುಂಬೈನಲ್ಲಿರೋ ಸಂಬಂಧಿಕರ ಬೃಹತ್ ಬಂಗಲೆಯಲ್ಲಿ ಸೋನಂ ತಮ್ಮ ಗೆಳೆಯನನ್ನು ಮದುವೆಯಾಗಲಿದ್ದಾರೆ.
ನಂತರ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಅದ್ಧೂರಿ ರಿಸೆಪ್ಷನ್ ಕೂಡ ಆಯೋಜಿಸಲಾಗ್ತಿದೆ. ಅನಿಲ್ ಕಪೂರ್ ಪುತ್ರಿಯ ವಿವಾಹ ಅಂದ್ಮೇಲೆ ವೈಭೋಗಕ್ಕೇನೂ ಕಡಿಮೆ ಇರೋದಿಲ್ಲ ಅಂತ ಎಲ್ಲರು ಅಂದುಕೊಂಡಿರುತ್ತಾರೆ. ಮನೆಯಲ್ಲೇ ಸಂಪ್ರದಾಯಬದ್ಧವಾಗಿ ಮದುವೆ ನೆರವೇರಬೇಕು ಅನ್ನೋದು ಅವರ ಆಸೆ. ಅಷ್ಟೇ ಅಲ್ಲ ಮದುವೆಗಾಗಿ ಕೋಟಿಗಟ್ಟಲೆ ಖರ್ಚು ಮಾಡೋದು ವ್ಯರ್ಥ ಅಂತಾ ಹೇಳಿಕೊಂಡಿದ್ದಾರೆ.
Comments