'ಕೇಸರಿ' ಸಿನಿಮಾ ಸೆಟ್ ನಲ್ಲಿ ಅಗ್ನಿ ಆಕಸ್ಮಿಕ

25 Apr 2018 1:54 PM | Entertainment
451 Report

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಐಸಿಹಾಸಿಕ ಕೇಸರಿ ಸಿನಿಮಾ ಸೆಟ್ನಲ್ಲಿ ಭಾರೀ ಅಗ್ನಿ ಆಕಸ್ಮಿಕ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಅಪಾರ ನಷ್ಟ ಉಂಟಾಗಿದ್ದು ಯಾವುದೇ ರೀತಿಯ ಸಾವು-ನೋವು ಸಂಭವಿಸಿಲ್ಲ.

ಮಹಾರಾಷ್ಟ್ರದ ಸತಾರದಿಂದ 30 ಕಿ.ಮೀ. ದೂರವಿರುವ ವೈ ತಹಸೀಲ್ ನ ಪಿಂಪೋಡ್ ಬುದ್ರುಂಕ್ ಗ್ರಾಮದಲ್ಲಿ ಹಾಕಲಾಗಿದ್ದ ಸೆಟ್ನಲ್ಲಿ ನಿನ್ನೆ ಚಿತ್ರೀಕರಣ ನಡೆಯುತ್ತಿದ್ದಾಗ ಬೆಂಕಿ ಕಾಣಿಸಿಕೊಂಡು ವ್ಯಾಪಿಸಿತು. ಸತಾರ ಪೊಲೀಸ್ ನಿಯಂತ್ರಣ ಕೊಠಡಿಗೆ ದೂರವಾಣಿ ಕರೆ ಬಂದ ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಅದೃಷ್ಟವಶಾತ್ ಯಾರಿಗೂ ಕೂಡ ಪ್ರಾಣಾಪಾಯವಾಗಿಲ್ಲ.ಈ  ಕೇಸರಿ ಸಿನಿಮಾದಲ್ಲಿ ಅಕ್ಷಯ್ ಕುಮಾರ್ 25ನೇ ಸಿಖ್ ಪದಾತಿದಳದ ಸೇನಾ ನಾಯಕ ಹವಿಲ್ದಾರ್ ಇಷಾರ್ ಸಿಂಗ್ ಪಾತ್ರ ನಿರ್ವಹಿಸುತ್ತಿದ್ದಾರೆ.

,

Edited By

Manjula M

Reported By

Manjula M

Comments