ಕನ್ನಡಾಭಿಮಾನಿಗಳ ಕೋಪಕ್ಕೆ ಗುರಿಯಾದ ಪ್ರಿನ್ಸ್

ಮಹೇಶ್ ಬಾಬು ಅಭಿನಯದ 'ಭರತ್ ಆನೇ ನೇನು' ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದ್ದು, ಬಾಕ್ಸ್ ಆಫೀಸ್ ನಲ್ಲೂ ಸಖತ್ ಆಗಿಯೇ ಕಮಾಲ್ ಮಾಡ್ತಿದೆ.
ಚಿತ್ರದ ಯಶಸ್ಸಿಗೆ ಕಾರಣರಾದವರೆಲ್ಲರಿಗೂ ಮಹೇಶ್ ಬಾಬು ಧನ್ಯವಾದವನ್ನು ಕೂಡ ತಿಳಿಸಿದ್ದಾರೆ.. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅವರು ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂನಲ್ಲಿ ಅವರು ಧನ್ಯವಾದ ತಿಳಿಸಿರುವ ಕಾರಣ ಕನ್ನಡ ಅಭಿಮಾನಿಗಳು ಪ್ರಿನ್ಸ್ ಬಗ್ಗೆ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ. ಕರ್ನಾಟಕದಲ್ಲಿ ಸುಮಾರು 100 ಸೆಂಟರ್ ಗಳಲ್ಲಿ 'ಭರತ್ ಆನೇ ನೇನು' ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನವನ್ನು ಕಾಣುತ್ತಿದೆ. ಅಭಿಮಾನಿಗಳು, ಸಿನಿರಸಿಕರು ಸಿನಿಮಾವನ್ನು ನೋಡಿ ಯಶಸ್ಸಿಗೆ ಕಾರಣರಾಗಿದ್ದಾರೆ. ಆದರೆ, ನೀವು ಕನ್ನಡದ ಅಭಿಮಾನಿಗಳನ್ನು ಪರಿಗಣಿಸಿಲ್ಲ ಎಂದು ಬೇಸರದಿಂದ ದೂರಿದ್ದಾರೆ. ಪಕ್ಷಪಾತ ಮಾಡದೇ ಬೇರೆ ಭಾಷೆಗಳಲ್ಲಿ ಧನ್ಯವಾದ ಹೇಳಿರುವಂತೆ ಕನ್ನಡದಲ್ಲಿ ಧನ್ಯವಾದ ಹೇಳಬೇಕಿತ್ತು ಎಂದು ತಿಳಿಸಲಾಗಿದೆ. ಇದನ್ನು ಗಮನಿಸಿದ ಪ್ರಿನ್ಸ್ ಮಹೇಶ್ ಬಾಬು ಕನ್ನಡದಲ್ಲಿಯೂ ಕೂಡ ಧನ್ಯವಾದವನ್ನು ತಿಳಿಸಿದ್ದಾರೆ.
Comments