45 ನೇ ವಸಂತಕ್ಕೆ ಕಾಲಿಟ್ಟ ಮಾಸ್ಟರ್ ಬ್ಲಾಸ್ಟರ್

24 Apr 2018 5:28 PM | Entertainment
430 Report

ಇಂದು ಮಾಸ್ಟರ್'ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 45ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಇಡಿ ಕ್ರಿಕೆಟ್ ಜಗತ್ತೆ ಶುಭಾಷಯವನ್ನು ಕೋರಿದ್ದಾರೆ.

24 ವರ್ಷಗಳ ಕ್ರಿಕೆಟ್ ವೃತ್ತಿ ಜೀವನ, 34,357 ರನ್, 200 ಟೆಸ್ಟ್ ಪಂದ್ಯ, 100 ಅಂತರಾಷ್ಟ್ರೀಯ ಶತಕ, 200 ವಿಕೆಟ್ ತೆಂಡುಲ್ಕರ್ ಸಾಧನೆಯ ಕೆಲ ಮೈಲುಗಲ್ಲಗಳಷ್ಟೆ ಇವು. ಏಕದಿನ ಕ್ರಿಕೆಟ್'ನಲ್ಲಿ ಮೊದಲ ದ್ವಿಶತಕ ಸಿಡಿದ ಬ್ಯಾಟ್ಸ್'ಮನ್ ಎಂಬ ದಾಖಲೆ ನಿರ್ಮಿಸಿದ ಮುಂಬೈಕರ್ ಮೈದಾನದಲ್ಲಿ ಹಾಗೂ ಮೈದಾನದಾಚೆಗೆ ಸಭ್ಯ ಕ್ರಿಕೆಟಿಗ ಅನಿಸಿಕೊಂಡಿದ್ದಾರೆ.  ಸಚಿನ್ ಜನ್ಮದಿನದ ಶುಭ ಸಂದರ್ಭದಲ್ಲಿ ವಿರೇಂದ್ರ ಸೆಹ್ವಾಗ್ ಸೇರಿದಂತೆ ಕ್ರಿಕೆಟ್ ಜಗತ್ತು ಶುಭಾಷಯವನ್ನು ತಿಳಿಸಿದೆ.

 

Edited By

Manjula M

Reported By

Manjula M

Comments