ಡಾ.ರಾಜ್ ಅಭಿಮಾನಿ ಏನ್ ಮಾಡ್ತಿದ್ದಾನೆ ಗೊತ್ತಾ?

ಅಭಿಮಾನಿಗಳೇ ದೇವರು ಎನ್ನುತ್ತಿದ್ದ, ಕೋಟ್ಯಾಂತರ ಅಭಿಮಾನಿಗಳ ಕನ್ನಡದ ಕಣ್ಮಣಿ, ಆರಾಧ್ಯ ದೈವ, ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ 89 ನೇ ಹುಟ್ಟುಹಬ್ಬ ಇಂದು.
ಪ್ರತಿ ಬಾರಿಯಂತೆ ಹುಟ್ಟಹಬ್ಬಕ್ಕೆ ರಾಜ್ ಸ್ಮಾರಕಕ್ಕೆ ಅವರ ಅಭಿಮಾನಿಗಳು ಸಾಕಷ್ಟು ಜನ ಬರುತ್ತಾರೆ. ಕಟ್ಟಾ ಅಭಿಮಾನಿಯೊಬ್ಬ ರಾಜ್ ಪುತ್ಥಳಿ ಬಳಿ ಇಂದು 11.30 ಕ್ಕೆ ಮದುವೆಯನ್ನು ಮಾಡಿಕೊಳ್ಳುತ್ತಿದ್ದಾರೆ.ಎಸ್.. ಡಾ.ರಾಜ್ ಅಭಿಮಾನಿಯಾಗಿರುವ ರುಧ್ರ ಎಂಬುವ ವ್ಯಕ್ತಿ ಕುರುಬರಹಳ್ಳಿಯ ರಾಜ್ ಪುತ್ಥಳಿ ಮುಂಭಾಗ ಮದುವೆಯಾಗಲಿದ್ದಾರೆ. ರುಧ್ರ ಅವರು ಶಿಲ್ಪಾ ಅವರೊಂದಿಗೆ ಇಂದು 11.30 ರ ಶುಭ ಮುಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಡಾ. ರಾಜ್ ಕುಮಾರ್ ಅವರ 89 ನೇ ಹುಟ್ಟುಹಬ್ಬದ ಪ್ರಯುಕ್ತ ಇಂದು ಅವರ ಕುಟುಂಬದವರು ಕಂಠೀರವ ಸ್ಟುಡಿಯೋಗೆ ಹೋಗಿ ಅವರ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಡಾ.ರಾಜ್ ಅಭಿಮಾನಿಗಳು ಎಷ್ಟರ ಮಟ್ಟಿಗೆ ಅವರನ್ನು ಪೂಜಿಸುತ್ತಾರೆ ಆರಾಧಿಸುತ್ತಾರೆ ಅನ್ನುವುದು ಇದರಿಂದಲೇ ತಿಳಿಯುತ್ತದೆ.
Comments