'ಭರತ್ ಆನೇ ನೇನು' ಸಿನಿಮಾಗೆ ಸಿಕ್ಕ ಭರ್ಜರಿ ರೆಸ್ಪಾನ್ಸ್ ಗೆ ಪ್ರಿನ್ಸ್ ಮಾಡಿದ್ದೇನು ಗೊತ್ತಾ?
ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಬಹು ನಿರೀಕ್ಷಿತ ಚಿತ್ರ 'ಭರತ್ ಆನೇ ನೇನು' ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದು, ಬಾಕ್ಸ್ ಆಫೀಸ್ ಗಳಿಕೆಯಲ್ಲಿ ದಾಖಲೆಯನ್ನು ಬರೆಯುತ್ತಿದೆ.
'ಭರತ್ ಆನೇ ನೇನು' ರೆಕಾರ್ಡ್ ಬ್ರೇಕಿಂಗ್ ಮಾಡಿದ್ದು, ವಿಶ್ವದಾದ್ಯಂತ 160 ಕೋಟಿ ರೂ. ಕಲೆಕ್ಷನ್ ಮಾಡಿದೆಯಂತೆ. ಈ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿರುವುದಕ್ಕೆ ಪ್ರಿನ್ಸ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಮಹೇಶ್ ಬಾಬು ಕೂಡ ಸಂಭ್ರಮದಲ್ಲಿದ್ದು, ಖುಷಿಯಲ್ಲಿ ಪತ್ನಿ ನಮ್ರತಾ ಅವರಿಗೆ ಕಿಸ್ ಮಾಡಿದ್ದರಾಂತೆ.. ಪತ್ನಿಯೊಂದಿಗೆ ರೋಮ್ಯಾಂಟಿಕ್ ಮೂಡ್ ನಲ್ಲಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, 'ಥ್ಯಾಂಕ್ ಯು ಮೈ ಲವ್' ಎಂದು ಹೇಳಿಕೊಂಡಿದ್ಧಾರೆ. ನಮ್ರತಾ ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, 'ಐ ಲವ್ ಯು ಟೂ ಮೈ ಲವ್' ಎಂದು ತಿಳಿಸಿದ್ದಾರೆ.
Comments