ಅಂತೂ ಇಂತೂ 'ದಿ ಟೆರರಿಸ್ಟ್' ಸಿನಿಮಾದ ಶೂಟಿಂಗ್ ಮುಗಿಸಿದ ರಾಗಿಣಿ

ಸ್ಯಾಂಡಲ್ ವುಡ್ನ ನಟಿ ರಾಗಿಣಿ ದ್ವಿವೇದಿ ಇದೀಗ 'ದಿ ಟೆರರಿಸ್ಟ್' ಎಂಬ ಸಿನಿಮಾ ಮಾಡುತ್ತಿದ್ದರು. ಈ ಸಿನಿಮಾದ ಚಿತ್ರೀಕರಣ ಇದೀಗ ಕಂಪ್ಲೀಟ್ ಆಗಿದ್ದು ಇದೇ ಖುಷಿಗೆ ಇಡೀ ಚಿತ್ರತಂಡ ಒಟ್ಟಿಗೆ ನಿಂತು ಫೋಟೋ ತೆಗೆದುಕೊಂಡಿದೆ.
ಪಿ.ಸಿ.ಶೇಖರ್ 'ದಿ ಟೆರರಿಸ್ಟ್' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು 'ರಾಗ' ಸಿನಿಮಾದ ನಂತರ ಪಿ.ಸಿ.ಶೇಖರ್ ಮಾಡುತ್ತಿರುವ ಚಿತ್ರ 'ದಿ ಟೆರರಿಸ್ಟ್'. ಇದೊಂದು ಮಹಿಳಾ ಪ್ರದಾನ ಸಿನಿಮಾವಾಗಿದ್ದು, ಪಿ.ಸಿ.ಶೇಖರ್ ಮೊದಲ ಬಾರಿಗೆ ಈ ರೀತಿಯ ಸಿನಿಮಾಗೆ ಕೈ ಹಾಕಿದ್ದಾರಂತೆ. ಪ್ರಚಲಿತ ಸಮಸ್ಯೆಗಳ ಮೇಲೆ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ ಹಾಗೂ ಸಿನಿಮಾದ ಹೆಸರಿಗೆ ತಕ್ಕಂತೆ ಭಯೋತ್ಪಾದನೆ ಕುರಿತ ಚಿತ್ರ ಇದಾಗಿದೆ ಎಮದು ನಿರ್ದೇಶಕ ಪಿಸಿ ಶೇಖರ್ ತಿಳಿಸಿದ್ದಾರೆ.ಈ ಚಿತ್ರವನ್ನು ಅಲಂಕಾರ್ ಸಂತಾನಂ ನಿರ್ಮಾಣ ಮಾಡಿದ್ದು ಸಿನಿಮಾವನ್ನು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಮಾಡುವ ಕನಸು ಇದೆಯಂತೆ. ಇನ್ನು ಚಿತ್ರಕ್ಕೆ ವೈದಿಯವರ ಕ್ಯಾಮರಾ ಕೈಚಳಕವಿದೆ. ಸಂಭಾಷಣೆಯನ್ನು ಚಿನ್ ಬರೆದಿದ್ದಾರೆ. ಡಿಸೆಂಬರ್ ನಲ್ಲಿ ಶುರುವಾದ ಚಿತ್ರ ಚಿತ್ರೀಕರಣ ಏಪ್ರಿಲ್ ನಲ್ಲಿ ಮುಗಿದಿದೆ.ಇನ್ನೂ ಚಿತ್ರ ಯಾವಾಗ ತೆರೆಮೇಲೆ ಬರುತ್ತದೆ ಅನ್ನೋದನ್ನ ಕಾದುನೋಡಬೇಕಿದೆ.
Comments