ಬಾಕ್ಸ್ ಆಫೀಸ್ ನೇ ಕೊಳ್ಳೆ ಹೊಡೆದ 'ಭರತ್ ಅನೇ ನೇನು'



ಕೊರಟಾಲ ಶಿವ ನಿರ್ದೇಶನದ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಬಹು ನಿರೀಕ್ಷಿತ ಚಿತ್ರ 'ಭರತ್ ಅನೇ ನೇನು' ಬಿಡುಗಡೆಯಾಗಿದೆ. ನಿರೀಕ್ಷೆಯಂತೆ ಸಿನಿಮಾ ಬಾಕ್ಸ್ ಆಫೀಸನ್ನು ಕೊಳ್ಳೆ ಹೊಡೆದಿದೆ.
ಗುರುವಾರವೇ ಯುಎಸ್‌ನಲ್ಲಿ ಮೊದಲ ದಿನದಂದೇ 2000 ಸ್ಕ್ರೀನಿಂಗ್ ಏರ್ಪಡಿಸಲಾಗಿತ್ತು. ಈಸ್ಟರ್ನ್ ಸ್ಟ್ಯಾಂಡರ್ಡ್ ಟೈಮ್ ಪ್ರಕಾರ ವಿದೇಶಗಳಲ್ಲಿ ಎಲ್ಲಾ ಕಡೆ ಮಧ್ಯಾಹ್ನ 3 ಗಂಟೆಗೆ ಶೋ ಆರಂಭವಾಗಿತ್ತು. ಮೊದಲ ದಿನವೇ ಯುಎಸ್‌ನಲ್ಲಿ ಸುಮಾರು 1 ಮಿಲಿಯನ್‌ಗೂ ಹೆಚ್ಚು ಕಲೆಕ್ಷನ್ ಆಗಿದೆ. ಆಸ್ಟ್ರೇಲಿಯಾದಲ್ಲಿ ಕೂಡಾ ಮೊದಲ ದಿನ 168,194 ಆಸ್ಟ್ರೇಲಿಯನ್ ಡಾಲರ್, ಅಂದರೆ ಸುಮಾರು 85 ಲಕ್ಷ ರೂ. ಗಳಿಸಿದೆ. ಇನ್ನು ತಮಿಳುನಾಡಿನಲ್ಲೂ ಸಿನಿಮಾ ಬಿಡುಗಡೆಯಾಗಿದ್ದು ಮೊದಲ ದಿನವೇ 27 ಲಕ್ಷ ರೂ. ಬಾಚಿಕೊಂಡಿದೆ. ದಕ್ಷಿಣ ಭಾರತದಲ್ಲಿ 25 ಕೋಟಿ ರೂ., ಯುಎಸ್‌ನಲ್ಲಿ 10 ಕೋಟಿ ರೂ., ಆಸ್ಟ್ರೇಲಿಯಾದಲ್ಲಿ 85 ಲಕ್ಷ ಸೇರಿ ವಿಶ್ವಾದ್ಯಂತ ಮೊದಲ ದಿನವೇ ಸಿನಿಮಾ ಸುಮಾರು 50 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ. ಥಿಯೇಟರ್‌ಗೆ ಹೋದ ಪ್ರತಿಯೊಬ್ಬರೂ ಸಿನಿಮಾ ನೋಡಿ ಮೆಚ್ಚಿದ್ದಾರೆ. ತಂದೆ ಮರಣದ ನಂತರ ರಾಜಕೀಯಕ್ಕೆ ಧುಮುಕಿ ಆಂಧ್ರ ಪ್ರದೇಶದ ಸಿಎಂ ಆಗಿ ರಾಜ್ಯದ ವ್ಯವಸ್ಥೆಯನ್ನು ಬದಲಿಸುವ ಭರತ್ ರಾಮ್ ಎಂಬ ಯುವಕನ ಸುತ್ತ ಕಥೆ ಸುತ್ತುತ್ತದೆ. ಇನ್ನು ಅಭಿಮಾನಗಳ ಪ್ರೀತಿಗೆ ಮಹೇಶ್ ಬಾಬು ಟ್ವಿಟರ್‌ನಲ್ಲಿ ಧನ್ಯವಾದ ಹೇಳಿದ್ದಾರೆ. ಗುರುವಾರ ಮಹೇಶ್ ಬಾಬು ತಾಯಿ ಇಂದಿರಾ ದೇವಿ ಜನ್ಮದಿನವಾಗಿದ್ದು, ತನ್ನ ತಾಯಿ ಫೊಟೋವನ್ನು ಅಪ್‌ಲೋಡ್ ಮಾಡಿ 'ವಿಶೇಷ ದಿನವಾದ ಇಂದು ನನ್ನ ಹೃದಯಕ್ಕೆ ಹತ್ತಿರವಾದ ಸಿನಿಮಾವನ್ನು ಬಿಡುಗಡೆ ಮಾಡಲು ಬಹಳ ಸಂತೋಷವಾಗುತ್ತಿದೆ' ಎಂದು ಬರೆದುಕೊಂಡಿದ್ದಾರೆ.
Comments