ಕುರುಕ್ಷೇತ್ರದ ದುರ್ಯೋಧನನಿಗೆ ಸಿಕ್ತು ಅಭಿಮಾನಿಯ ಅಪರೂಪದ ಉಡುಗೊರೆ

ಬಣ್ಣದ ಜಗತ್ತಿನಲ್ಲಿ ಅಭಿಮಾನಿಗಳನ್ನು ಸಂಪಾದಿಸುವುದು ಅಷ್ಟು ಸುಲಭದ ಮಾತಲ್ಲ. ಸ್ಟಾರ್ ಗಳನ್ನು ಮತ್ತಷ್ಟು ಸ್ಟಾರ್ ಮಾಡುವುದು ಅಭಿಮಾನಿಗಳು. ಅದೇ ರೀತಿ ದಚ್ಚು ಕೂಡ ಸಾಕಷ್ಟು ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಅಭಿಮಾನಿಗಳಿಗೆ ಚಾಲೆಂಜಿಂಗ್ ಸ್ಟಾರ್ ಬಗ್ಗೆ ಸಾಕಷ್ಟು ಒಲವಿದೆ. ಅದಕ್ಕೆಲ್ಲಾ ಮೋಸ ಮಾಡದಂತೆ ಕೂಡ ನಮ್ಮ ಡಿ-ಬಾಸ್ ನೋಡಿಕೊಂಡಿದ್ದಾರೆ.
ಒಬ್ಬೊಬ್ಬ ಅಭಿಮಾನಿಯೂ ಒಂದೊಂದು ರೀತಿಯಲ್ಲಿ ಆಲೋಚನೆಯನ್ನು ಮಾಡುತ್ತಾರೆ. ತಮಗೆ ಇಷ್ಟವಾದ ನಟನನ್ನ ಸೆಳೆಯುವುದಕೋಸ್ಕರ ಹೊಸ ಹೊಸ ರೀತಿಯ ಐಡಿಯಾಗಳನ್ನ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದು ಫ್ಯಾನ್ಸ್ ಗಳ ಮಧ್ಯೆಯೂ ಸಾಕಷ್ಟು ಕಾಂಪಿಟೇಷನ್ ಹುಟ್ಟುಕೊಂಡಿದೆ. ಅದಕ್ಕಾಗಿ ಪ್ರತಿಯೊಬ್ಬರು ವಿಭಿನ್ನವಾಗಿ ಆಲೋಚನೆ ಮಾಡುವ ಅವಶ್ಯಕತೆ ಬಂದು ಬಿಟ್ಟಿದೆ. ಅದರಲ್ಲೂ ನಮ್ಮ ದಚ್ಚುಗೆ ಅಂದ್ರೆ ಕೇಳಬೇಕಾ? ಒಂದು ಕಯ ಮೇಲೆ ಇರ್ತಾರೆ.ದರ್ಶನ್ ಅಭಿಮಾನಿಯೊಬ್ಬರು ವಿಭಿನ್ನವಾದ ಉಡುಗೊರೆಯನ್ನು ನೀಡಿ ದರ್ಶನ್ ಅವರನ್ನು ಮದುವೆಗೆ ಆಹ್ವಾನ ಮಾಡಿದ್ದಾರೆ..ಯಾವುದು ಆ ಉಡುಗೊರೆ ಅಂತ ತಲೆಕೆಡಿಸಿಕೊಳ್ಳುತ್ತಿದ್ದಿರಾ.. ಹಾಗಾದ್ರೆ ಮುಂದೆ ಓದಿ.
ಸದ್ಯ ದರ್ಶನ್ ಅಂದರೆ ಅಭಿಮಾನಿಗಳು 'ಕುರುಕ್ಷೇತ್ರ' ಸಿನಿಮಾ ಯಾವಾಗ ಬಿಡುಗಡೆ ಎನ್ನುತ್ತಿದ್ದಾರೆ. ಇದೇ ರೀತಿ ಆಲೋಚನೆ ಮಾಡಿರುವ ಅಭಿಮಾನಿಯಾದ ಕಿರಣ್ ದರ್ಶನ್ ಅವರ ದುರ್ಯೋಧನನ ಲುಕ್ ನಲ್ಲಿರುವ ಫೋಟೋವನ್ನು ಪೇಯಿಂಟ್ ಮಾಡಿಸಿ ಗಿಪ್ಟ್ ಆಗಿ ನೀಡಿದ್ದಾರೆ. ಕಿರಣ್ ಎನ್ನುವ ದರ್ಶನ್ ಅವರ ಅಭಿಮಾನಿ ಡಿ ಬಾಸ್ ಅವರನ್ನ ತನ್ನ ಮದುವೆಗೆ ಆಹ್ವಾನ ಮಾಡಬೇಕೆಂದು ನಿರ್ಧಾರ ಮಾಡಿದ್ದರು. ದರ್ಶನ್ ಭೇಟಿ ಮಾಡುವಾಗ ಬರಿ ಕೈನಲ್ಲಿ ಹೇಗೆ ಹೋಗುವುದು ಎನ್ನುವುದನ್ನ ಯೋಚನೆ ಮಾಡಿ ನಂತರ ಧುರ್ಯೋಧನನ ಲುಕ್ ನಲ್ಲಿರುವ ದರ್ಶನ್ ಅವರ ಫೋಟೋವನ್ನು ಪೇಯಿಂಟ್ ಮಾಡಿಸಿ ತೆಗೆದುಕೊಂಡು ಹೋಗಿದ್ದಾರೆ.ದರ್ಶನ್ ಈ ಪೇಯಿಂಟ್ ನೋಡಿ ಮೆಚ್ಚುಗೆಯನ್ನು ಕೂಡ ವ್ಯಕ್ತ ಪಡಿಸಿದ್ದಾರೆ.
Comments