ಅಭಿಮಾನಿಗಳಿಗೆ ಹರಿಪ್ರಿಯಾ ಸಿಹಿ ಸುದ್ದಿ ಕೊಡ್ತಾರಂತೆ..!
ಸ್ಯಾಂಡಲ್ ವುಡ್ ನಲ್ಲಿ ಚಿಕ್ಕಬಳ್ಳಾಪುರದ ಚೆಲ್ವಿ ಅಂತಾನೇ ಫೇಮಸ್ ಆಗಿರುವ ನೀರ್ ದೋಸೆ ಬೆಡಗಿ ಹರಿಪ್ರಿಯಾ ಅಭಿಮಾನಿಗಳಿಗೆ ಹೊಸ ಸುದ್ದಿಯೊಂದನ್ನ ಕೊಡ್ತಾರಂತೆ. ಈ ರೀತಿಯ ಸುದ್ದಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಹರಿದಾಡ್ತಿದೆ.
ಹರಿಪ್ರಿಯಾ ಅಂತಹ ಸುದ್ದಿ ಏನು ಹೇಳುತ್ತಾರೆ ಅನ್ನುವುದು ಅಭಿಮಾನಿಗಳ ಮಧ್ಯೆ ಚರ್ಚೆ ಆಗುತ್ತಿದೆ. ನಟಿ ಹರಿಪ್ರಿಯಾ ತಮ್ಮ ಹೊಸ ಲುಕ್ ನಲ್ಲಿರುವ ಎರಡು ಪೋಟೋಗಳನ್ನ ಟ್ವಿಟ್ಟರ್ ನಲ್ಲಿ ಅಪ್ಡೇಟ್ ಮಾಡಿದ್ದಾರೆ. 'ಒಂದು ಹೊಸ ವಿಚಾರ ನಿಮಗೆಲ್ಲಾ ಹೇಳಬೇಕು, ಆದರೆ ಈಗಲೇ ಹೇಳುವಂತಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಕಂಪ್ಲೀಟ್ ಮಾಹಿತಿ ಕೊಡುತ್ತೇನೆ' ಎಂದಿದ್ದಾರೆ. ಸದ್ಯ ಹರಿಪ್ರಿಯಾ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಬೆಲ್ ಬಾಟಂ, ಕುರುಕ್ಷೇತ್ರ ಚಿತ್ರಗಳಲ್ಲಿ ವಿಭಿನ್ನ ಪಾತ್ರವನ್ನು ನಿರ್ವಹಿಸಿದ್ದಾರೆ. ಮಹಿಳಾ ಪ್ರಧಾನ ಚಿತ್ರವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇವುಗಳ ಜೊತೆಯಲ್ಲಿ ಲೈಫ್ ಜೊತೆ ಒಂದ್ ಸೆಲ್ಫಿ, ಕಥಾ ಸಂಗಮ, ಸೂಜಿದಾರ ಇನ್ನು ಅನೇಕ ಚಿತ್ರಗಳಲ್ಲಿ ಹರಿಪ್ರಿಯ ಅಭಿನಯಿಸುತ್ತಿದ್ದಾರೆ. ಸಿನಿಮಾದ ಬಗ್ಗೆ ಬಿಟ್ಟು ಬೇರೆ ಏನು ಹೇಳುತ್ತಾರೆ ಅನ್ನೊದನ್ನ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
Comments