ಇನ್ನೂ ಹತ್ತು ದಿನಗಳಲ್ಲಿ ಯಶ್ ಇನ್ ಓಲ್ಡ್ ಲುಕ್

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಅವರನ್ನ ಗಡ್ಡವನ್ನು ನೋಡಿ ಅವರು ಕೂಡ ಅದೇ ರೀತಿ ಫಾಲೋ ಮಾಡ್ತಿದ್ದಾರೆ. ಅಷ್ಟೆ ಅಲ್ಲದೆ ಅವರನ್ನು ಗಡ್ಡದಲ್ಲಿ ನೋಡಿ ಎರಡು ವರ್ಷಗಳು ಆಗುತ್ತಾ ಬರುತ್ತಿದೆ. ಗಡ್ಡ ಬೆಳೆಸಿಕೊಂಡು ರಾಕಿಂಗ್ ಸ್ಟಾರ್ ಅದನ್ನೇ ಟ್ರೆಂಡ್ ಮಾಡಿ ಬಿಟ್ಟಿದ್ದಾರೆ.
ಯಶ್ ಅಭಿಮಾನಿಗಳು ರಾಕಿಂಗ್ ಸ್ಟಾರ್ ಸ್ಟೈಲ್ ಕಾಪಿ ಮಾಡುತ್ತಿದ್ದಾರೆ. ಲೈವ್ ಆರಂಭ ಆದ ಕೆಲವೇ ನಿಮಿಷಗಳಲ್ಲಿ ಅಭಿಮಾನಿಗಳು ಕೆಜಿಎಫ್ ಸಿನಿಮಾ ಬಗ್ಗೆ ಪ್ರಶ್ನೆಗಳನ್ನ ಕೇಳಲು ಆರಂಭ ಮಾಡಿದರು. ಆಗ ಗಡ್ಡ ಇಲ್ಲದ ಯಶ್ ಅವರನ್ನ ನೋಡುವುದು ಯಾವಾಗ ಎನ್ನುವ ಪ್ರಶ್ನೆಗೆ ಉತ್ತರಿಸಿದ ಯಶ್ ನನಗೆ ಗಡ್ಡ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಕೆಜಿಎಫ್ ಸಿನಿಮಾ ಶೂಟಿಂಗ್ ಕೇವಲ 10 ದಿನಗಳು ಮಾತ್ರ ಬಾಕಿ ಇದೆ. ಚಿತ್ರೀಕರಣ ಮುಗಿದ ತಕ್ಷಣ ಶೇವ್ ಮಾಡುತ್ತೇನೆ ಎಂದಿದ್ದಾರೆ. ಇನ್ನು ಹತ್ತು ದಿನಗಳ ನಂತರ ರಾಕಿಂಗ್ ಸ್ಟಾರ್ ತಮ್ಮ ಓಲ್ಡ್ ಲುಕ್ ಗೆ ಬರಲಿದ್ದಾರೆ.ಹತ್ತು ದಿನಗಳಲ್ಲಿ ಕೆಜಿಎಫ್ ಸಿನಿಮಾ ಮುಗಿಯಲಿದ್ದು ಸಿನಿಮಾತಂಡ ನಂತರ ಪೋಸ್ಟ್ ಪ್ರೊಡಕ್ಷನ್ಸ್ ನಲ್ಲಿ ಬ್ಯುಸಿ ಆಗಲಿದೆ. ಮೊಗ್ಗಿನ ಮನಸು ಯಶ್ ಅವರನ್ನು ನೋಡಬೇಕೆಂದಿರುವ ಅಭಿಮಾನಿಗಳು ಇನ್ನು ಸ್ವಲ್ಪ ದಿನ ಕಾಯಲೆಬೇಕು.
Comments