ಹ್ಯಾಟ್ರಿಕ್ ಹೀರೊ ಜೊತೆ ಚಾಲೆಂಜಿಂಗ್ ಸ್ಟಾರ್ ಸಿನಿಮಾ ಮಾಡ್ತಾರಾ?

ಸ್ಯಾಂಡಲ್ ವುಡ್ ನಲ್ಲಿ ಮಲ್ಟಿಸ್ಟಾರ್ ಸಿನಿಮಾಗಳ ಮಾತು ತುಂಬಾ ಹಳೆಯದು. ಈಗಾಗಲೇ ಹಲವು ಸ್ಟಾರ್ ನಟರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡು ತಮ್ಮ ಸಿನಿ ರಸಿಕರನ್ನು ರಂಜಿಸಿದ್ದು ಕೂಡ ಆಗಿದೆ.
ಸ್ಯಾಂಡಲ್‌ವುಡ್ ಅಂಗಳದಲ್ಲಿ ಕೆಲವೊಂದು ಜೋಡಿಗಳು ಮಾತ್ರ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಶಿವರಾಜ್ ಕುಮಾರ್- ದರ್ಶನ್ ಹಾಗೂ ಸುದೀಪ್-ದರ್ಶನ್ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಸಿನಿರಸಿಕರ ಕನಸು ಅಂತ ಕೂಡ ಹೇಳಬಹುದು.ಶಿವಣ್ಣ ಹಾಗೂ ದರ್ಶನ್ ಮುಖಾಮುಖಿ ಆದಾಗಲೆಲ್ಲ ಒಟ್ಟಾಗಿ ಸಿನಿಮಾ ಮಾಡುವ ಮಾತು ಕೇಳಿ ಬರುತ್ತಿತ್ತು.. ಈಗ ಇಬ್ಬರು ಸ್ಟಾರ್‌ಗಳು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಗಾಂಧಿನಗರದಲ್ಲಿ ಮಾತು ಶುರುವಾಗಿದೆ. ಶಿವರಾಜ್ ಕುಮಾರ್ ಸಿನಿಮಾದಲ್ಲಿ ದರ್ಶನ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆಂದು ಹೇಳಲಾಗಿದೆ. ಆದರೆ, ಈ ಸ್ಟಾರ್‌ಗಳಿಬ್ಬರ ಮುಖಾಮುಖಿಗೆ ವೇದಿಕೆ ಆಗುವ ಸಿನಿಮಾ ಯಾವುದು ಎನ್ನುವುದು ನಿಗೂಢವಾಗಿ ಉಳಿದಿದೆ. ಶಿವಣ್ಣ ಅಭಿನಯದ ರುಸ್ತುಂ ಚಿತ್ರಕ್ಕೆ ಏಪ್ರಿಲ್ 24ರಂದು ಡಾ. ರಾಜ್‌ಕುಮಾರ್ ಹುಟ್ಟು ಹಬ್ಬ ದ ಸಂದರ್ಭದಲ್ಲಿ ಮುಹೂರ್ತ ಫಿಕ್ಸ್ ಆಗಿದೆ. ಅವತ್ತೇ ಟೀಸರ್ ಲಾಂಚ್ ಆಗುತ್ತಿದೆ. ಈ ಚಿತ್ರದಲ್ಲಿ ದರ್ಶನ್ ಇರ್ತಾರಾ ಅನ್ನೊದೇ ಕುತೂಹಲದ ವಿಷಯ. ಸದ್ಯಕ್ಕೆ ಯಾವುದೂ ಪಕ್ಕವಾಗಿಲ್ಲವಾದರೂ ಗಾಂಧಿ ನಗರದಲ್ಲಿ ಮಾತ್ರ ಈ ಸುದ್ದಿ ಹರಿದಾಡುತ್ತಿದೆ.
Comments