ಕನ್ನಡದ ಕೋಟ್ಯಾಧಿಪತಿಗೆ ಹೊಸ ಸಾರಥಿಯಂತೆ

ಕನ್ನಡದ ಕಿರುತೆರೆಯಲ್ಲಿ ರಿಯಾಲಿಟಿ ಷೋ ಗಳಿಗೆ ಏನು ಬರವಿಲ್ಲ. ಸಾಕಷ್ಟು ರೀತಿಯ ವಿವಿಧ ರೀತಿಯ ಕಾರ್ಯಕ್ರಮಗಳು ಬರುತ್ತಿರುತ್ತವೆ. ಅದರಲ್ಲಿ ಕನ್ನಡದ ಕೋಟ್ಯಾಧಿಪತಿ ಕೂಡ ಒಂದು. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ನಟ ಪುನೀತ್ ರಾಜ್ ಕುಮಾರ್ ತುಂಬಾ ಚೆನ್ನಾಗಿ ನಡೆಸಿಕೊಟ್ಟಿದ್ದರು.
'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಎರಡು ಸೀಸನ್ ಗಳು ಈಗಾಗಲೇ ಮುಗಿದಿದೆ. ಮೂರನೇ ಸೀಸನ್ ಶುರು ಮಾಡಬೇಕು ಎನ್ನುವುದು ಅನೇಕ ವೀಕ್ಷಕರ ಆಸೆ ಕೂಡ ಆಗಿದೆ. ಅದೇ ರೀತಿ ಸುವರ್ಣ ವಾಹಿನಿ ಕೂಡ ಈಗ ಮತ್ತೆ ತನ್ನ ಸೂಪರ್ ಹಿಟ್ ಕಾರ್ಯಕ್ರಮದ ಮೂಲಕ ಕಮ್ ಬ್ಯಾಕ್ ಮಾಡಲು ರೆಡಿಯಾಗುತ್ತಿದೆ. ಹಿರಿತೆರೆಯ ಸಿನಿಮಾಗಳು ಮಾತ್ರವಲ್ಲದೆ ಕಿರುತೆರೆಯಲ್ಲಿ ದೊಡ್ಡ ದೊಡ್ಡ ಜನಪ್ರಿಯ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿರುವ ಖ್ಯಾತಿ ಹೊಂದಿರುವ ನಟ ರಮೇಶ್ ಅರವಿಂದ್ ಅವರಿಗೆ ಸಲ್ಲುತ್ತದೆ. ಈಗ 'ಕನ್ನಡ ಕೋಟ್ಯಾಧಿಪತಿ' ಕಾರ್ಯಕ್ರಮದ ಹೊಣೆಯನ್ನು ಕೂಡ ಹೊತ್ತುಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆಕನ್ನಡ ಕೋಟ್ಯಾಧಿಪತಿ' ಕಾರ್ಯಕ್ರಮಕ್ಕೆ ಪುನೀತ್ ರಾಜ್ ಕುಮಾರ್ ಬದಲು ರಮೇಶ್ ಅರವಿಂದ್ ಬರುವ ಬಗ್ಗೆ ಅಂತಿಮ ಹಂತದ ಮಾತುಕತೆ ನಡೆಯುತ್ತಿದೆ. ರಮೇಶ್ ಕಾರ್ಯಕ್ರಮದ ಅಗ್ರಿಮೆಂಟ್ ಗಳಿಗೆ ಸಹಿ ಹಾಕುವುದು ಮಾತ್ರ ಬಾಕಿ ಇದೆಯಂತೆ.ಇತ್ತೀಚಿಗಷ್ಟೆ ಪುನೀತ್ ರಾಜ್ ಕುಮಾರ್ ತಮ್ಮ 'ಫ್ಯಾಮಿಲಿ ಪವರ್' ಕಾರ್ಯಕ್ರಮವನ್ನು ಮುಗಿಸಿದ್ದಾರೆ. ಇದರ ನಂತರ 'ನಟ ಸಾರ್ವಭೌಮ' ಸಿನಿಮಾದ ಶೂಟಿಂಗ್ ಕೂಡ ನಡೆಯುತ್ತಿದ್ದು ಬಳಿಕ ಸಂತೋಷ್ ಆನಂದ್ ರಾಮ್ ನಿರ್ದೇಶಕದ ಸಿನಿಮಾದಲ್ಲಿ ಪುನೀತ್ ನಟಿಸಬೇಕಾಗಿದೆ. ರಮೇಶ್ ಅವರ ಕನ್ನಡದ ಕೋಟ್ಯಾಧಿಪತಿ ನಿರೂಪಣೆ ಹೇಗೆ ಬರುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.
Comments