ರುಸ್ತುಂ ಹೀರೋ ಶಿವಣ್ಣನಿಗೆ ವಿಲನ್ ಯಾರು?

ಸಾಹಸ ನಿರ್ದೇಶಕ ರವಿವರ್ಮ ಆಕ್ಷನ್ ಕಟ್ ಹೇಳಲಿರುವ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯಿಸಲಿರುವ 'ರುಸ್ತಂ' ಸಿನಿಮಾ ಅಣ್ಣಾವ್ರ ಹುಟ್ಟುಹಬ್ಬಕ್ಕೆ ಸೆಟ್ಟೇರಲಿದೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಖಡಕ್ ಪೊಲೀಸ್ ಆಫೀಸರ್ ಆಗಿ ಮಿಂಚಲಿದ್ದಾರಂತೆ.
ಫೋಟೋಶೂಟ್ ಮುಗಿಸಿರುವ ಚಿತ್ರತಂಡ ಕಲಾವಿದರ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದೆ.ಸದ್ಯ ರುಸ್ತುಂ ಚಿತ್ರಕ್ಕಾಗಿ ವಿಲನ್ ಹುಡುಕಾಟ ಜೋರಾಗಿದೆ. ಶಿವಣ್ಣನ ಎದುರು ಖಡಕ್ ವಿಲನ್ ಬೇಕು ಎಂಬ ಕಾರಣಕ್ಕೆ ದೊಡ್ಡ ವಿಲನ್ ಒಬ್ಬರನ್ನ ಕರೆತರುವ ಪ್ರಯತ್ನ ರುಸ್ತುಂ ಚಿತ್ರತಂಡಕ್ಕೆ ಇದೆಯಂತೆ. ಈ ಚಿತ್ರಕ್ಕೆ ವಿಲನ್ ಯಾರೂ ಎಂಬುದು ಇನ್ನು ಅಂತಿಮವಾಗಿಲ್ಲ. ಇನ್ನುಳಿದಂತೆ ಜಯಣ್ಣ-ಭೋಗೇಂದ್ರ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಎನ್ನುವುದು ತಿಳಿದುಬಂದಿದೆ. ಈ ಚಿತ್ರ ಏಪ್ರಿಲ್ 24ರಂದು ಸೆಟ್ಟೇರಲಿದ್ದು, ಮೇ 10ರಿಂದ ಚಿತ್ರೀಕರಣ ಶುರುವಾಗಲಿದೆ. ಬೆಂಗಳೂರು, ಬಿಹಾರ ಸೇರಿದಂತೆ ದೇಶದ ಹಲವೆಡೆ ರುಸ್ತುಂ ಚಿತ್ರದ ಚಿತ್ರೀಕರಣ ನಡೆಯಲಿದೆ.
Comments