ನಟಿ ಮಯೂರಿ ಸಿ.ಎಂ ಮಗಳಂತೆ..!
ಅಶ್ವಿನಿ ನಕ್ಷತ್ರ ಧಾರವಾಹಿಯ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟ ಮಯೂರಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರಲ್ಲಿ ಸೈ ಎನಿಸಿಕೊಂಡರು.
ಕನ್ನಡದ 'ಕೃಷ್ಣ ಲೀಲಾ' ಚಿತ್ರದ ನಾಯಕಿ ಮಯೂರಿ ಮಾಜಿ ಮುಖ್ಯಮಂತ್ರಿಗಳ ಮಗಳಂತೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಅಯ್ಯೋ ಇದೇನಿದು ಹೊಸ ವಿಚಾರ ಅಂತಾ ಶಾಕ್ ಆಗ್ತಿದ್ದೀರಾ? ಹಾಗೇನಿಲ್ಲ ಇದು ರಿಯಲ್ ಅಲ್ಲಾ ಓನ್ಲಿ ರೀಲ್.ನಟಿ ಮಯೂರಿ ಹೊಸ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ, ಈ ಚಿತ್ರದಲ್ಲಿ ಮಯೂರಿ ಮುಖ್ಯಮಂತ್ರಿಯ ಮಗಳ ಪಾತ್ರವನ್ನು ನಿರ್ವಹಿಸುತ್ತಿದ್ದಾರಂತೆ ಹೌದು, ಸಿಗ್ನೇಚರ್ ಎಂಬ ಹೊಸ ಸಿನಿಮಾದಲ್ಲಿ ನಟಿ ಮಯೂರಿ ನಟಿಸುತ್ತಿದ್ದು, ರಂಜಿತ್ ಕುಳಾಯಿ ಎಂಬ ಹೊಸ ಪ್ರತಿಭೆ ಮಯೂರಿಗೆ ನಾಯಕನಾಗಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಅಂದಹಾಗೆ ಈಗಾಗಲೇ ಚಿತ್ರದ ಚಿತ್ರೀಕರಣ ಕೂಡ ಪ್ರಾರಂಭ ಆಗಿದೆ.
Comments