ಕಿಚ್ಚನ ಲೀಸ್ಟ್ ಗೆ ಸೇರಿಕೊಂಡ ನ್ಯೂ ಬೈಕ್
ಎಲ್ಲರಿಗೂ ಕೂಡ ಒಂದೊಂದು ಆಸೆ ಇರುತ್ತೆ. ಅದೇ ರೀತಿ ಕಿಚ್ಚ ಸುದೀಪ್‌ಗೂ ಕೂಡ ಕಾರ್ ಮತ್ತು ಬೈಕ್ ಗಳ ಮೇಲೆ ಸಿಕ್ಕಾಪಟ್ಟೆ ಕ್ರೇಜ್ ಇದೆ. ಈಗಾಗಲೇ ಕಿಚ್ಚನ ಬಳಿ ಸಾಕಷ್ಟು ಕಾರ್ ಗಳಿದ್ದು ಸದ್ಯ ಅವರ ಕಾರ್ ಮತ್ತು ಬೈಕ್ ಗಳ ಲೀಸ್ಟ್ಗೆ ಹೊಸದೊಂದು ಗಾಡಿ ಸೇರಿಕೊಂಡಿದೆ.
ಹೊಸ ಬೈಕ್ ಕೊಂಡುಕೊಂಡ ತಕ್ಷಣವೇ ಕಿಚ್ಚ ಲಾಂಗ್ ರೈಡ್ ಕೂಡ ಹೋಗಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜೊತೆ ನಟ ಚಂದನ್ ಕೂಡ ಸಾಥ್ ನೀಡಿದ್ದಾರೆಹೊಸ ಬೈಕ್ ಕೊಂಡುಕೊಂಡ ಸುದೀಪ್ ನಟ ಕಿಚ್ಚ ಸುದೀಪ್ ಹೊಸ ಬೈಕ್ ಕೊಂಡುಕೊಂಡಿದ್ದಾರೆ . ಬಿಎಂಡಬ್ಲ್ಯೂ ಆರ್ 1200 ಬೈಕ್ ನಿನ್ನೆಯಷ್ಟೇ ಖರೀದಿ ಮಾಡಿದ್ದಾರೆ. ಈಗಾಗಲೇ ತಿಳಿದಿರುವಂತೆ ಸುದೀಪ್ ಬಳಿ ಸಾಕಷ್ಟು ಬೈಕ್ಸ್ ಕಲೆಕ್ಷನ್ಸ್ ಇದೆ.ಸುದೀಪ್ ಜೊತೆ ಚಂದನ್ ಅಭಿನಯದ ಚಕ್ರವರ್ತಿ ಬೈಕ್ ಕೊಂಡುಕೊಳ್ಳುವಾಗ ನಟ ಚಂದನ್ ಕೂಡ ಜೊತೆಯಲ್ಲಿಯೇ ಹೋಗಿದ್ದಾರಂತೆ. ಬಿಎಂಡಬ್ಲ್ಯೂ ಆರ್ 1200 ಹೊಸ ಬೈಕ್ ನಲ್ಲಿ ಸುತ್ತಾಟ ಶುರುವಾಗಿದೆ. ಕಿಚ್ಚ ತಾವೇ ಶೋ ರೂಮ್ ಗೆ ಭೇಟಿ ನೀಡಿ ಹೊಸ ಬೈಕ್ ಅನ್ನು ತೆಗೆದುಕೊಂಡು ಬಂದಿದ್ದಾರಂತೆ. ಹೊಸ ಬೈಕ್ ಖರೀದಿ ಮಾಡಿರುವ ಖುಷಿಯಲ್ಲಿ ಸಿಲಿಕಾನ್ ಸಿಟಿ ಪೂರ್ತಿ ಸುತ್ತಾಡಿದ್ದು ಕೂಡ ಆಯ್ತು.
Comments