ಕನ್ನಡದ ವರ್ತಮಾನ ಸಿನಿಮಾ ಯಾವ ಭಾಷೆಗೆ ರಿಮೇಕ್ ಆಗಲು ರೆಡಿಯಾಗಿದೆ ಗೊತ್ತಾ?

ಸ್ಯಾಂಡಲ್ ವುಡ್ ವಿಭಿನ್ ರೀತಿಯ ಕಥಾ ಹಂದರವನ್ನು ಹೊಂದಿರುವ ಚಿತ್ರ ಸಾಕಷ್ಟಿವೆ.ಆದರೆ ಕಥೆ ಹೇಳುವವನು ಅದನ್ನು ಸರಿಯಾಗಿ ಅರ್ಥ ಮಾಡಿಸುವಲ್ಲಿ ಯಶಸ್ವಿಯಾಗಬೇಕು.
ಕಥಾವಸ್ತುವನ್ನು ಸಾಂಕೇತಿಕವಾಗಿ ಹೇಳುವ ನಿರೂಪಣಾ ಶೈಲಿ ಯೂರೋಪಿಯನ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಹೀಗಾಗಿ, 'ವರ್ತಮಾನ' ಚಿತ್ರವನ್ನ ಫ್ರೆಂಚ್ ಅಥವಾ ಇಂಗ್ಲೀಷ್ ಭಾಷೆಗೆ ರೀಮೇಕ್ ಮಾಡಲು ನಿರ್ದೇಶಕ ಉಮೇಶ್ ಅಂಶಿ ರೆಡಿಯಾಗಿದ್ದಾರೆ.. ಸ್ಯಾಂಡಲ್ ವುಡ್ ನಲ್ಲಿ ಬಾಕ್ಸ್ ಆಫೀಸ್ ನಲ್ಲಿ ಅಷ್ಟೇನು ಸದ್ದು ಮಾಡದ 'ವರ್ತಮಾನ' ಚಿತ್ರವನ್ನ ಇದೀಗ ವಿದೇಶಗಳಲ್ಲಿ ಬಿಡುಗಡೆ ಮಾಡಲು ಉಮೇಶ್ ಅಂಶಿ ತಯಾರಿಯ್ನನು ಈಗಾಗಲೇ ನಡೆಸಿದ್ದು ನಂತರ 'ವರ್ತಮಾನ' ಚಿತ್ರವನ್ನ ಫ್ರೆಂಚ್ ಅಥವಾ ಇಂಗ್ಲೀಷ್ ಭಾಷೆಗೆ ರೀಮೇಕ್ ಮಾಡುವೆ ಎಂದು ಉಮೇಶ್ ಅಂಶಿ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
Comments