ಮಮತಾ ರಾಹುತ್ ನ ನ್ಯೂ ಲುಕ್

ಕಳೆದ ಒಂದು ದಶಕದಿಂದಲೂ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟಿಯಾಗಿಯೂ , ಪೋಷಕ ಪಾತ್ರದಲ್ಲಿಯೂ ಚಂದನವನದಲ್ಲಿ ಸ್ಥಾನ ಗಟ್ಟಿ ಮಾಡಿಕೊಂಡಿರುವಂತಹ ನಟಿ ಎಂದರೆ ಅದು ಮಮತಾ ರಾಹುತ್.
'ಗೂಳಿಹಟ್ಟಿ' ಚಲನ ಚಿತ್ರದ ಮೂಲಕ ನಾಯಕಿಯ ಪಟ್ಟಕ್ಕೇರಿದ ಅಚ್ಚ ಕನ್ನಡದ ಹುಡುಗಿ ಮಮತಾರಾಹುತ್ ಇದೀಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಸಧ್ಯಕ್ಕೀಗ ಬಿಂದಾಸ್ ಗೂಗ್ಲಿ, ಪುಣ್ಯಾತ್ ಗಿತ್ತೀರು, ಶಿವನಪಾದ, ಹಾಗೂ ಡಿಡಿ ಚಿತ್ರಗಳಲ್ಲಿ ಮಮತಾ ಅಭಿನಯಿಸುತ್ತಿದ್ದಾರೆ. ಹಾಗೂ ಒಂದು ಚಿತ್ರದಿಂದ ಒಂದೊಂದು ಚಿತ್ರಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಜೊತೆಗೆ ಟಾಮ್ ಬಾಯ್ ಹೇರ್ ಕಟ್ ಮಾಡಿಸಿಕೊಂಡಿದ್ದಾರೆ.ಸಾಮಾನ್ಯವಾಗಿ ಕೆಲ ನಟಿಯರು ಟ್ಯಾಟೂವನ್ನು ಕಿವಿ, ಕುತ್ತಿಗೆ, ಸೊಂಟ, ಕಾಲು, ಬೆನ್ನಿಗೆ ಹಾಕಿಸಿಕೊಳ್ಳುತ್ತಾರೆ. ಆದರೆ ಮಮತಾ ರಾಹುತ್ ಕೆನ್ನೆಯ ಮೇಲೆ ಟ್ಯಾಟು ಹಾಕಿಸಿಕೊಂಡಿದ್ದಾರೆ. ಇನ್ನು ಬಿಂದಾಸ್ ಗೂಗ್ಲಿ, ಹಾಗೂ ಪುಣ್ಯಾತ್ ಗಿತ್ತೀರು ಚಿತ್ರಗಳಲ್ಲಿ ಪೈಟಿಂಗ್ ಮಾಡಿರುವ ಮಮತಾ ಅವರು ಬಬ್ಲಿಯಾಗಿ ಗಂಡುಬೀರಿ ಪಾತ್ರವನ್ನು ನಿರ್ವಹಿಸಲಿದ್ದಾರೆ.
Comments