ಅಭಿಮಾನಿಗಳಲ್ಲಿ ತೂಗುದೀಪ ಶ್ರೀನಿವಾಸ್ ಜನ್ಮದಿನದ ಸಂಭ್ರಮ
ಕನ್ನಡ ಸಿನಿಮಾರಂಗದಲ್ಲಿ ಖಳನಟ ಅಂದರೇನೆ ಒಂಥರಾ ಬೇರೆಯದ್ದೇ ಗತ್ತು-ಗಾಂಭೀರ್ಯ ಇದೆ ಎನ್ನುವುದನ್ನ ಅಭಿನಯದ ಮೂಲಕವೇ ಪ್ರೇಕ್ಷಕರಿಗೆ ತೋರಿಸಿಕೊಟ್ಟ ನಟ ತೂಗುದೀಪ ಶ್ರೀನಿವಾಸ್. ಕಲಾವಿದನಿಗೆ ಸಾವಿದೆಯೆ ಹೊರತು ಕಲಾವಿದನ ಕಲೆಗೆ ಸಾವಿಲ್ಲ ಅನ್ನುವುದಕ್ಕೆ ತೂಗುದೀಪ ಶ್ರೀನಿವಾಸ್ ಅವರು ಉತ್ತಮ ಉದಾಹರಣೆ ಎನ್ನಬಹುದು.
ಅಂತೆಯೇ ತೂಗುದೀಪ ಶ್ರೀನಿವಾಸ್ ಅಪಾರ ಅಭಿಮಾನಿಗಳನ್ನ ಅಗಲಿದ್ದರು ಕೂಡ ಇಂದಿಗೂ ಕನ್ನಡ ಸಿನಿಮಾ ಪ್ರೇಮಿಗಳ ಮನಸ್ಸಿನಲ್ಲಿ ಅಜರಾಮರ ಎನ್ನುವುದು ಎಂದೆಂದಿಗೂ ಕೂಡ ಸತ್ಯ.ಕನ್ನಡ ಸಿನಿಮಾರಂಗದಲ್ಲಿ ನಟ ತೂಗುದೀಪ ಶ್ರೀನಿವಾಸ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಹಿರಿಯರಿಂದ ಕಿರಿಯರ ವರೆಗೂ ಅಭಿಮಾನಿಗಳನ್ನ ಸಂಪಾದನೆ ಮಾಡಿರುವಂತಹ ತೂಗುದೀಪ ಶ್ರೀನಿವಾಸ್ ಅವರ ನೆನಪಿನಲ್ಲಿ ಅಭಿಮಾನಿಗಳು ಇಂದು ಹುಟ್ಟುಹಬ್ಬವನ್ನ ಆಚರಣೆಯನ್ನು ಮಾಡುತ್ತಿದ್ದಾರೆ.
Comments