ಟಗರಿನ ಪೊಗರನ್ನು ಮೆಚ್ಚಿಕೊಂಡ ಇಂಗ್ಲೆಂಡ್ ಕ್ರಿಕೆಟರ್

ಟಗರಿನ ಪೊಗರಿಗೆ ಈಗಾಗಲೇ 50 ದಿನವನ್ನು ಪೂರೈಸಿದೆ. ಹ್ಯಾಟ್ರಿಕ್ ಹೀರೋ ಅಭಿನಯದ ಹಾಗೂ ಸೂರಿ ನಿರ್ದೇಶನಕ್ಕೆ ಇಡೀ ಸಿನಿಮಾರಂಗವೇ ಫಿದಾ ಆಗಿದ್ದಾರೆ. ಬೇರೆ ಭಾಷೆಯ ಪ್ರೇಕ್ಷಕರು ಹಾಗೂ ಸಿನಿಮಾರಂಗದ ನಂಟೇ ಇಲ್ಲದವರು ಕೂಡ ಟಗರು ಚಿತ್ರವನ್ನು ನೋಡಲು ಇಷ್ಟ ಪಡುತ್ತಿದ್ದಾರೆ.
ಇತ್ತೀಚಿಗೆ ಇಂಗ್ಲೆಂಡ್ ಕ್ರಿಕೆಟರ್ 'ಒವೈಶ್ ಷಾ' ಟಗರು ಸಿನಿಮಾವನ್ನ ನೋಡಿದ್ದಾರೆ. ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾವನ್ನ ನೋಡಿರುವ ಒವೈಶ್ ಷಾ ಚಿತ್ರ ಮತ್ತು ಶಿವಣ್ಣನ ಅಭಿನಯಕ್ಕೆ ಮೆಚ್ಚುಗೆಯನ್ನ ಕೂಡ ವ್ಯಕ್ತ ಪಡಿಸಿದ್ದಾರೆ. ಅಷ್ಟೇ ಅಲ್ಲದೆ ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಿನಿಮಾರಂಗಕ್ಕೂ ಕ್ರಿಕೆಟ್ ಲೋಕಕ್ಕೂ ಒಂಥರಾ ನಂಟು ಎನ್ನಬಹುದು ಕ್ರಿಕೆಟರ್ ಆಗಬೇಕು ಎಂದುಕೊಂಡಿದ್ದ ಎಷ್ಟೊ ಜನ ಸಿನಿಮಾ ಸ್ಟಾರ್ ಗಳಾಗಿರುವ ಸಾಕಷ್ಟು ಉದಾಹರಣೆಗಳು ಕೂಡ ನಮಗೆಲ್ಲಾ ತಿಳಿದುಕೊಂಡಿವೆ.ಅದರಲ್ಲಿಯೂ ಕನ್ನಡ ಚಿತ್ರವನ್ನ ನೋಡಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಮಾತ್ರವಲ್ಲದೆ ಎಲ್ಲೆಡೆ ಟಗರು ತನ್ನ ಪೊಗರಿನ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿರುವುದು ಹಾಗೂ ಬೇರೆ ಭಾಷೆಯ ಜನರು ಸಿನಿಮಾವನ್ನ ಮೆಚ್ಚಿಕೊಳ್ಳುತ್ತಿರುವುದು ಕನ್ನಡಿಗರಿಗೆ ಖುಷಿಯ ವಿಚಾರವೇ ಸರಿ ಎನ್ನಬಹುದು.
Comments